ಕುರುಗೋಡಿನಲ್ಲಿ ಜನೌಷಧಿ ಕೇಂದ್ರ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.30: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಇಂದು ಜನೌಷಧಿ ಕೇಂದ್ರ ಆರಂಭಗೊಂಡಿದೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನ ಔಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾಕ್ಟರ್ ರೂಪ ಜಾಲಿಹಾಳ್. ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ದೊರೆಯುವ ಔಷಧಿಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಜನೌಷಧಿ ಕೇಂದ್ರದಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತವೆ. ಎಲ್ಲಾ ರೋಗಿಗಳು ಇದೇ ಕೇಂದ್ರದಲ್ಲಿ ಔಷಧಿ ಖರೀದಿಸಿ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಐದು ಜನ ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ಜನ ಔಷಧಿ ಅಂಗಡಿ ಮಾಲೀಕ ಎಸ್ ರವಿ. ಎಸ್ ನಾಗಪ್ಪ. ಸಿ ಷಣ್ಮುಖ ಮತ್ತು ಜೆ ವಿರುಪಾಕ್ಷಿ ಇದ್ದರು.