ಕುರುಗೋಡಿನಲ್ಲಿ ಉಚಿತ ಕೊರೋನಾ ಪರೀಕ್ಷೆ; ಸಾರ್ವಜನಿಕರು ಉಪಯೋಗಿಸಿಕೊಳ್ಳಿರಿ

ಕುರುಗೋಡು, ನ.5: ಪಟ್ಟಣದ ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಕರೋನಾಪರೀಕ್ಷೆ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದು ಉತ್ತಮ ಆರೋಗ್ಯವಂತರಾಗಿರಿ ಎಂದು ಕುರುಗೋಡು ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ ಹೇಳಿದರು.
ಅವರು ಬುದವಾರ ಪಟ್ಟಣದ ಶ್ರೀದೊಡ್ಡಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕುರುಗೋಡು ತಾಲೂಕು ಆಡಳಿತ ವತಿಯಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕರೋನಾಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಬಗ್ಗೆ ಭಯಬೇಡ, ಎಲ್ಲರೂ ಎಚ್ಚರದಿಂದ ಇರಬೇಕು. ಈ ನಿಟ್ಟಿನಲ್ಲಿ ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ ಎಂಬಂತೆ ಎಲ್ಲರೂ ಮುಂಜಾಗ್ರತಕ್ರಮವಾಗಿ ಮಾಸ್ಕ್ ಧರಿಸಿ, ಸ್ಯಾನಿಟೇಜರ್‍ನಿಂದ ಕೈಗಳನ್ನು ತೊಳೆದು, ಅಂತರ ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು.
ಪ್ರಯೋಗಶಾಲಾ ತಂತ್ರಜ್ನ ಮೌನೇಶಆಚಾರಿ, ಜಯಶ್ರೀಯವರು ಸಾಲು-ಸಾಲಾಗಿ ಬಂದಂತರಹ ಸಾರ್ವಜನಿಕರು ಹಾಗು ಡಿಗ್ರಿಕಾಲೇಜಿನಿ ಸಿಬ್ಬಂದಿತಂಡದವರಿಗೆ ಕೊರೋನಾಪರೀಕ್ಷೆ ಮಾಡಿದರು. ಡಾ. ಶ್ರೀಕರಗೌಡ, ಡಾ. ಗುರುಬಸವರಾಜ, ಕುರುಗೋಡು ಗ್ರಾಮಲೆಕ್ಕಾಧಿಕಾರಿ ಯಮನೂರಪ್ಪ, ಆರೋಗ್ಯ ಸಹಾಯಕ ಮಂಜುನಾಥ, ಬಳ್ಳಾರಿಯ ಆರೋಗ್ಯಸಹಾಯಕ ಟಿ.ವಿರುಪಾಕ್ಷ ಸೇರಿದಂತೆ ಕುರುಗೋಡು ಆಸ್ಪತ್ರೆಯ ಸಿಬ್ಬಂದಿತಂಡ, ಆಶಾಕಾರ್ಯಕರ್ತರು ಇದ್ದರು.