ಕುರಿ ಸಾಕಾಣಿಕೆ ತರಬೇತಿ ಪಡೆದು ಸ್ವಾವಲಂಬಿಗಳಾಗಿ: ಗಂಜಗಿರಿ

ಚಿಂಚೋಳಿ,ಸೆ.8- ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಹತ್ತು ದಿನಗಳ ಕುರಿ ಸಾಕಾಣಿಕೆ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಬಾಂಸೆಪ ಮತ್ತು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ನವದೇಹಲಿ ಬೆಂಗಳೂರು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ, ಅವರು ಮಾತನಾಡಿ, ಮನುಷ್ಯರು ಯಾವುದೇ ಒಂದು ಕ್ಷೇತ್ರದಲ್ಲಿ ತಾವಂದುಕೊಂಡಿದ್ದನ್ನು ಸಾಧಿಸಿ ಗುರಿ ಮುಟ್ಟಬೇಕಾದರೆ ತರಬೇತಿಯಿಂದ ಮಾತ್ರ ಸಾಧ್ಯವೆಂದರು.
ಉನ್ನತ ವ್ಯಾಸಂಗ ಮಾಡಿ ನಿರುದ್ಯೋಗಿಯಾಗಿದ್ದವರು ಜೀವನದಲ್ಲಿ ಬದುಕುವ ಭರವಸೆ ಕಳೆದುಕೊಂಡವರು ಕುರಿ ಮತ್ತು ಇನ್ನಿತರ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬಿ ಆದರ್ಶದ ಬದುಕು ಮಾಡುತ್ತಿದ್ದಾರೆ ಜಿಲ್ಲಾ ಕೇಂದ್ರಗಳಲ್ಲಿ ಹೋಗಿ ಗ್ರಾಮೀಣ ಭಾಗದ ಜನರಿಗೆ ತರಬೇತಿ ಪಡೆಯುವುದು ಕಷ್ಠವೆಂದರಿತ ಸಂಸ್ಥೆಯವರು ಗ್ರಾಮೀಣ ಭಾಗದಲ್ಲಿ ಈ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ ಆದ್ದರಿಂದ ಆಯ್ಕೆಯಾದ ಪಲಾನುಭವಿಗಳು ತಪ್ಪದೆ ತರಬೇತಿಯಲ್ಲಿ ಭಾಗವಹಿಸಿ ಸರ್ಕಾರದ ಲಾಭವನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕು ಮಾಡಬೇಕೆಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತರಬೇತಿಯ ಮುಖ್ಯಸ್ಥ ತರಬೇತುದಾರರಾದ ಅರ್ಜುನರಾವ ರವರು ನಮ್ಮ ದೇಶವು ಇತರ ದೇಶಗಳಂತೆ ಅಭಿವೃದ್ಧಿಯಾಗಬೇಕಾದರೆ ನಾವು ಮೊದಲು ಗ್ರಾಮೀಣ ಭಾಗಕ್ಕೆ ಒತ್ತು ಕೊಟ್ಟಾಗ ಮಾತ್ರ ಸಾದ್ಯವೆಂಬ ರಾಷ್ಟ್ರಪೀತ ಮಾಹತ್ಮ ಗಾಂಧೀಜಿಯವರ ಕನಸ್ಸಿನಂತೆ ಇಂದು ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಯುವಕರಿಗೆ ವಾಹನ ರಿಪೇರಿ ಮೊಬೈಲ್ ರಿಪೇರಿ ಬಡಿಗೆತನ ಕಂಬಾರಿಕೆ ಕುಂಬಾರಿಕೆ ಮತ್ತು ವಿಶೇಷವಾಗಿ ಯುವತಿಯರಿಗೆ ಮಹಿಳೆಯರಿಗೆ ವಿಧವೆಯರಿಗೆ ಸುಮಾರು ಬಗೆಯ ತರಬೇತಿಗಳನ್ನು ನೀಡುತ್ತಾ ಸಮಾಜದಲ್ಲಿ ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿ ಬದುಕು ತಲೆಯೆತ್ತಿ ಬದುಕು ಮಾಡುವಂತೆ ತಯ್ಯಾರು ಮಾಡುವಲ್ಲಿ ನಮ್ಮ ಸಂಸ್ಥೆಯು ಮುನ್ನುಗ್ಗುತ್ತಿದೆ ಆದ್ದರಿಂದ ತಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಕಾರ್ಯಕರ್ತರಾದ ಭಾರತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗೈಬಣ್ಣಾ ವಾಲಿಕಾರ ಗ್ರಾ ಪಂ ಸದಸ್ಯರಾದ ಇಮಾಮ್ ಪಟೇಲ ಕಾರ್ಯದರ್ಶಿಗಳಾದ ನಾಗೇಂದ್ರಪ್ಪ ರವಿ ಪೂಜಾರಿ ಹೀರೆಮಠ ಧನರಾಜ್ ಗೋಪಾಲ ಗಾರಂಪಳ್ಳಿ ವಿಶ್ವನಾಥ್ ಅಂಜುಮ್ ಅಜರಾ ಬೇಗಂ ಮಾತನಾಡಿದರು ಸುಲೋಚನ ನಿರೂಪಿಸಿದರೆ ಶಿವಲೀಲಾ ವಂದಿಸಿದರು.