ಕುರಿ -ದನಗಳ ಸಂತೆ ವ್ಯವಹಾರದಲ್ಲಿ ಸೌಜನ್ಯತೆ ಕಾಪಾಡಿ -ಶಾಸಕ ಎನ್ ವೈ ಜಿ

ಕೂಡ್ಲಿಗಿ.ಜ. 7:- ಇದೇ ಮೊದಲ ಬಾರಿಗೆ ಕೂಡ್ಲಿಗಿಯಲ್ಲಿ ಪ್ರತಿ ಬುಧವಾರ ಪ್ರಾರಂಭವಾಗುತ್ತಿರುವ ಕುರಿ-ದನಗಳ ಮಾರುಕಟ್ಟೆಯಲ್ಲಿ ಉತ್ತಮರೀತಿಯಲ್ಲಿ ವ್ಯವಹರಿಸುವ ಮೂಲಕ ಎಲ್ಲರೂ ಸೌಜನ್ಯತೆ ಕಾಪಾಡಿಕೊಳ್ಳಿ ಎಂದು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಶ್ರೀ ಕೊತ್ತಲಅಂಜನೇಯ ಸ್ವಾಮಿಯ ಬಯಲು ಜಾಗದಲ್ಲಿ ಬುಧವಾರ ಪ್ರಾರಂಭವಾದ ಕುರಿ -ದನಗಳ ಮಾರುಕಟ್ಟೆಗೆ ಚಾಲನೆ ನೀಡಿ ಮಾತನಾಡುತ್ತ ರೈತರು ದನ -ಕುರಿಗಳ ಖರೀದಿ ಮಾಡಲು ಬೇರೆ ಬೇರೆ ಜಿಲ್ಲೆಯ ಮಾರುಕಟ್ಟೆಗಳಿಗೆ ಹೋಗಿ ವ್ಯವಸಾಯಕ್ಕೆ ತರಲಾಗುತ್ತಿತ್ತು ಆದರೆ ನಮ್ಮ ಹಿಂದುಳಿದ ತಾಲೂಕಿನ ರೈತರಿಗೆ ಹೊರೆಯಾಗದಂತೆ ಪ್ರತಿ ಬುಧವಾರಕ್ಕೊಮ್ಮೆ ದನ ಕುರಿ ಮಾರುಕಟ್ಟೆಯನ್ನು ಕೂಡ್ಲಿಗಿಯಲ್ಲಿ ಪ್ರಾರಂಭಗೊಳಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು. ವ್ಯಾಪಾರ ವಹಿವಾಟಿನಲ್ಲಿ ಕಿರಿ ಕಿರಿ ಹೊಡೆಬಡೆಮಾಡುವ ಕೆಲಸ ಮಾಡಿದಲ್ಲಿ ಮುಲಾಜಿಲ್ಲದೆ ಅಂತಹ ವ್ಯಕ್ತಿಗಳ ಮೇಲೆ ಮುಲಾಜಿಲ್ಲದೆ ಕಾನೂನು ರೀತ್ಯಾ ಕ್ರಮಕೈಗೊಳ್ಳುವಂತೆ ತಿಳಿಸಿ ಶಾಂತರೀತಿಯ ವ್ಯಾಪಾರಗಳು ಮಾಡುವುದರಿಂದ ಬೇರೆಯವರು ಸಂತೆಗೆ ವ್ಯಾಪಾರ ವಹಿವಾಟಿನಲ್ಲಿ ಭಾಗವಯಿಸಿ ಮಾರುಕಟ್ಟೆಯ ಹೆಸರು ಉತ್ತುಂಗಮಟ್ಟಕ್ಕೆ ಕೊಂಡೊಯ್ಯುವುದು ನಿಮ್ಮೆಲ್ಲರ ಕೈಯಲ್ಲಿದೆ ಇಲ್ಲಿ ನಡೆಯುವ ವ್ಯವಹಾರಕ್ಕೆ ಸಂಬಂದಿಸಿದಂತೆ ಇಂತಿಷ್ಟು ಹಣವನ್ನು ಪಟ್ಟಣ ಪಂಚಾಯತಿಗೆ ಕಟ್ಟಬೇಕಾಗಿದೆ ಆ ಹಣದಿಂದ ಮಾರುಕಟ್ಟೆಯನ್ನು ಹಂತ ಹಂತವಾಗಿ ಹೆಚ್ಚು ಹೆಚ್ಚು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯತಿ ಮುಂದಾಗಬೇಕಿದೆ ಎಂದು ಶಾಸಕರು ತಿಳಿಸಿದರು ಮತ್ತು ಜೋಡೆತ್ತುಗಳ ಬಳಿ ಬಂದು ಅವುಗಳಿಗೆ ಕೈಮುಗಿದು ನಮಸ್ಕರಿಸಿದರು
ಮುಂದಾಗಲಿದೆ ಪಟ್ಟಣಪಂಚಾಯತಿ ನೂತನ ಅಧ್ಯಕ್ಷರಾದ ಶಾರದಾಬಾಯಿ ಮಾತನಾಡುತ್ತ ಕೂಡ್ಲಿಗಿಯಂತಹ ಹಿಂದುಳಿದ ಪ್ರದೇಶಗಳಲ್ಲಿ ಒಂದು ಉತ್ತಮ ಮಾರುಕಟ್ಟೆ ನಿರ್ಮಾಣಕ್ಕೆ ಶಾಸಕರು ಮುಂದಾಗಿ ಉತ್ತಮ ಕಾರ್ಯಮಾಡುತ್ತಿದ್ದು ಮಾರುಕಟ್ಟೆಗೆ ಅಗತ್ಯ ವಸ್ತುಗಳು, ಕುಡಿಯುವ ನೀರಿನ ಯೋಜನೆಗೆ ಪಟ್ಟಣ ಪಂಚಾಯತಿವತಿಯಿಂದ ಸೌಲಭ್ಯ ಕಲ್ಪಿಸಲಾಗುವುದೆಂದು ತಿಳಿಸಿದರು. ಪ ಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ ಬಹುದಿನದ ಬೇಡಿಕೆ ದನ ಕುರಿ ಮಾರುಕಟ್ಟೆಗೆ ಚಾಲನೆ ದೊರೆತಿದ್ದು ಅದನ್ನು ಉಳಿಸಿಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ವ್ಯವಹಾರದ ಮದ್ಯದಲ್ಲಿ ಬೇಕಾ ಬಿಟ್ಟಿಯಲ್ಲಿ ಬಂದು ವಿನಃಕಾರಣ ಜಗಳ ತೆಗೆದುಕೊಳ್ಳದೆ ವ್ಯವಹಾರಕ್ಕೆ ತೊಂದರೆಕೊಡುವವರನ್ನು ಮಲಾಜಿಲ್ಲದೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದರು ಅಲ್ಲದೆ ಬೆರಳಣಿಕೆಯಷ್ಟು ಕಿಡಿಗೇಡಿಗಳು ವ್ಯಾಪಾರ ವಹಿವಾಟಿಗೆ ತೊಂದರೆಕೊಟ್ಟರೆ ಮುಲಾಜಿಲ್ಲದೆ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಶಿವಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹಾಬಲೇಶ್ವರ, ಪಟ್ಟಣಪಂಚಾಯತಿ ಉಪಾಧ್ಯಕ್ಷೆ ಊರಮ್ಮ, ಮುಖ್ಯಾಧಿಕಾರಿ ಫಕ್ರುದ್ದೀನ್ , ಸದಸ್ಯರುಗಳಾದ ಕಾಲ್ಚಾಟ್ಟಿ ಈಶಪ್ಪ, ಸಿರಿಬಿ ಮಂಜುನಾಥ., ಸಚಿನ್ ಕುಮಾರ್, ಚಂದ್ರು, ಶುಕೂರ್ , ಪೂರ್ಯಾನಾಯ್ಕ್, ಬಾಸುನಾಯ್ಕ್ , ಮಾಜಿ ಸದಸ್ಯರಾದ ಎಸ್. ದುರುಗೇಶ್, ಸಣ್ಣಕೊತ್ತಲಪ್ಪ, ರಾಘವೇಂದ್ರ, ಅಂಜಿನಪ್ಪ. ಮಲ್ಲಾಪುರದ ಭರಮಪ್ಪ, ಜಯಮ್ಮರ ರಾಘವೇಂದ್ರ, ಡೊಂಬರ ಅಜ್ಜಯ್ಯ ಸೇರಿದಂತೆ ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
.