ಕುರಿ ಕಳ್ಳತನ: ತೆಲಂಗಾಣದ ಇಬ್ಬರ ಬಂಧನ

ಚಿಂಚೋಳಿ,ಜು.28-ಕುರಿ ಕಳ್ಳತನ ಮಾಡುತ್ತಿದ್ದ ತೆಲಂಗಾಣ ಮೂಲದ ಇಬ್ಬರನ್ನು ಬಂಧಿಸಿರುವ ಚಿಂಚೋಳಿ ಪೊಲೀಸರು 2 ಕುರಿ ಮತ್ತು 1 ಬೈಕ್ ಜಪ್ತಿ ಮಾಡಿದ್ದಾರೆ.
ತೆಲಂಗಾಣದ ಪೋಮು ರಾಠೋಡ್ (38) ಮತ್ತು ವಿಕ್ರಮ್ ರಾಠೋಡ್ (23) ಬಂಧಿತ ಆರೋಪಿಗಳು.
ಕುಸರಂಪಳ್ಳಿ ಗ್ರಾಮದ ಸುಧಾಕರ ಮೇತ್ರಿ ಎಂಬುವರು ಮೂರು ಕುರಿ ಕಳ್ಳತನವಾದ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಎಸ್.ಪಿ.ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿ.ಎಸ್.ಪಿ.ಬಸವರಾಜ ಕೆ., ಸಿಪಿಐ ಮಹಾಂತೇಶ ಬಿ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ಮಂಜುನಾಥ ರೆಡ್ಡಿ, ಸಿಬ್ಬಂದಿಗಳಾದ ಅಶೋಕ, ರಮೇಶ, ನಾಗರಾಜ, ಮಾಳಪ್ಪ, ಶಿವಾನಂದ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.