ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಳ್ಳತನ

ಕಲಬುರಗಿ,ಜು.18-ನಗರದ ಪಶು ಆಸ್ಪತ್ರೆಯ ಆವರಣದಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ನಿಗಮದ ಕಚೇರಿಯ ಬೀಗ ಮುರಿದು ಕಳ್ಳರು 22 ಸಾವಿರ ರೂ.ಮೌಲ್ಯದ ಎರಡು ತುಕ್ಕು ಹಿಡಿದ ಚಾಫ್ ಕಟ್ಟರ್ಸ್ (ಮೇವು ಕಟಾವು ಮಾಡುವ ಮಷೀನ್), 7 ಸಾವಿರ ರೂ.ಮೌಲ್ಯದ ಎಕ್ಸಿಟ್ ಕಂಪನಿಯ ಎರಡು ನಿರುಪಯುಕ್ತ ಯುಪಿಎಸ್ ಬ್ಯಾಟರಿ, 300 ರೂ.ಮೌಲ್ಯದ 2 ಹಳೆಯ ಮುರಿದ ಪ್ಲಾಸ್ಟಿಕ್ ಕುರ್ಚಿ ಸೇರಿ 29,300 ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ನಿಗಮದ ಉಪ ನಿರ್ದೇಶಕ ಡಾ.ವಿಠೋಬಾ ಆಸಂಗಿಹಾಳ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.