ಕುರಿಗಾಹಿ ಮೇಲೆ ಮೂರು ಕರಡಿಗಳು ದಿಢೀರ್ ದಾಳಿ.

ಜಗಳೂರು.ಸೆ.೧೭; ಅಣಬೂರು ಗ್ರಾಮದ ಹೊರಹೊಲಯದಲ್ಲಿ ಕುರಿಗಾಹಿ ಮೇಲೆ ದಿಢೀರ್ ನೆ ಮೂರು ಕರಡಿಗಳು ದಾಳಿನಡೆಸಿದ್ದು ತೀವ್ರಗಾಯಕ್ಕೊಳಗಾಗಿದ್ದಾರೆ.ಗಾಯಾಳು ಅಣಬೂರು ಗೊಲ್ಲರಹಟ್ಟಿ ಗ್ರಾಮದ
ಅಜ್ಜಪ್ಪ (47) ಕುರಿಗಾಹಿ ಊಟ ಮಾಡಿಕೊಂಡು ತನ್ನ ಕುರಿ ಹಟ್ಟಿಗೆ ತೆರಳುವಾಗ  ಅಣಬೂರು ಗೊಲ್ಲರಹಟ್ಟಿಯ ಹೋರಭಾಗದಲ್ಲಿ ಮೂರು ಕರಡಿಗಳು ಏಕಾಏಕಿ ದಾಳಿನಡೆಸಿದ್ದು. ಕುರಿಗಾಹಿಯ ಎದೆಯ ಭಾಗ ಕೈಕಾಲು, ತಲೆಯ ಭಾಗಗಳಿಗೆ  ಗಂಭೀರ ಗಾಯವಾದ ಪರಿಣಾಮ  ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥತಿ ಚಿಂತಜನಕವಾಗಿದೆ
ಅದೇ ಗ್ರಾಮದಲ್ಲಿ ಒಂದು ತಿಂಗಳು ಹಿಂದೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿಮಾಡಿದ್ದು ಬೇಳಕಿಗೆ ಬಂದಿದ್ದರೂ ಸಂಬಂದಪಟ್ಟ ಅರಣ್ಯ ಇಲಾಖೆ ಯಾವುದೆಕ್ರಮ ಕೈಗೊಂಡಿಲ್ಲ ಕೂಡಲೆ ವಲಯ ಅರಣ್ಯ ಅಧಿಕಾರಿಗಳು ಗಮನ ಹರಿಸಿ ಕರಡಿಗಳ ಉಪಟಳಕ್ಕೆ  ಕಡಿವಾಣ ಹಾಕಬೇಕು ಗಾಯಕ್ಕೊಳಗಾದವರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಸಮಾಜದ ಮುಖಂಡ ಎಚ್.ಎಂ ಹೊಳೆ ಮಹಾಲಿಂಗಪ್ಪ ಒತ್ತಾಯಿಸಿದ್ದಾರೆ.