ಕುರಿಗಾಹಿಗಳ ಮೇಲೆ ಎಗರಿದ ಹುಲಿ: ಇಬ್ಬರಿಗೆಗಾಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.13- ಕುರಿಹಾಹಿಗಳ ಮೇಲೆ ಹುಲಿ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿರುವ ಘಟನೆಗುಂಡ್ಲುಪೇಟೆತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗುಂಡ್ಲುಪೇಟೆತಾಲೂಕಿನ ಶಿವಪುರ ಗ್ರಾಮದಜವರಶೆಟ್ಟಿ ಹಾಗೂ ಶಿವಶೆಟ್ಟಿ ಎಂಬವರು ಹುಲಿ ದಾಳಿಯಿಂದ ಗಾಯಗೊಂಡುಗುಂಡ್ಲುಪೇಟೆ ಸಾರ್ವಜನಿಕಆಸ್ಪತ್ರೆಗೆದಾಖಲಾಗಿದ್ದಾರೆ. ಶಿವಶೆಟ್ಟಿ, ಜವರಶೆಟ್ಟಿಅವರಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿ ಹುಲಿ ಗಾಯಗೊಳಿಸಿದೆ.
ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರುಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟುಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ. ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಪುಟ್ಟಸಿದ್ದಯ್ಯ ಹಾಗೂ ಇನ್ನಿತರರು ದೌಡಾಯಿಸಿ ಬೆದರಿಸಿದ ಬಳಿಕ ಹುಲಿ ಕಾಡಿನತ್ತಓಡಿದೆಎಂದು ತಿಳಿದುಬಂದಿದೆ.
ಹುಲಿ ಮನುಷ್ಯರ ಮೇಲೆ ದಾಳಿ ಮಾಡಲು ಮುಂದಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದುಕೂಡಲೇ ಹುಲಿ ಸೆರೆ ಹಿಡಿಯಬೇಕೆಂದುರೈತರು ಒತ್ತಾಯಿಸಿದ್ದಾರೆ.