ಕುರಿಗಾರರಿಂದ ಪ್ರತಿಭಟನೆ

ಧಾರವಾಡ,ನ11: ನವಲೂರು ಬಡಾವಣೆಯಲ್ಲಿ ಕುರಿ ಕಾಯುತ್ತಿದ್ದವನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನ್ನು ಖಂಡಿಸಿ ಹಾಗೂ ಕುರುಬರಿಗೆ ಎಸ್ಟಿ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕುರಿಗಾರರು ಕುರಿಗಳ ಜೊತೆಗೆ ಬಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ ದೇವರು ಸ್ವಾಮೀಜಿ, ಬಸವರಾಜ ಮಲಕಾರಿ, ಬಸವರಾಜ ಕಟಗಿ, ರಮೇಶ ನಲವಡಿ, ನಿಂಗಪ್ಪ ಬಡಕುರಿ, ಬಸವರಾಜ ನಾಯ್ಕರ ಸೇರಿದಂತೆ ಹಲವರು ಇದ್ದರು.