ಕುರಿಗಾಯಿ ಕುಟುಂಬಕ್ಕೆ ಎಂಪಿಆರ್ ನೆರವು

ಹೊನ್ನಾಳಿ.ಮೇ.೫; ಹೊಟ್ಟೆಪಾಡಿಗಾಗೀ ಕುರಿಗಾಯಿ ಜೀವನ ನಡೆಸುತ್ತಿದ್ದ ಕುರಿಗಾಯಿ ಕುಟುಂಬಕ್ಕೆ ಬರಸಿಡಿಲು ಶಾಪವಾಗಿ ಪರಿಣಮಿಸಿದ ಘಟನೆ ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.ಶಿರಾ ತಾಲೂಕಿನ ಗಿಣ್ಣಪ್ಪಹಟ್ಟಿ ಗ್ರಾಮದ ಚತುರ್‌ಲಿಂಗಪ್ಪ ಮೃತ ದುದೈವಿ. ಮಂಗಳವಾರ ಸಂಜೆ ಹೊನ್ನಾಳಿ ತಾಲೂಕಿನಾಧ್ಯಂತ ಗುಡುಗು ಸಿಡಿಲು ಸಮೇತ ಧಾರಕಾರವಾಗಿ ಮಳೆ ಸುರಿದ ಪರಿಣಮ ಚತುರ್‌ಲಿಂಗಪ್ಪ ಮರದ ಕೆಳಗೆ ನಿಂತು ಪೋನ್ ನಲ್ಲಿ ಮಾತನಾಡುವಾಗ ಸಿಡಿಲು ಅಪ್ಪಳಿಸಿದೆ.ಪರಿಣಾಮ ಚತುರ್ ಲಿಂಗಪ್ಪ ಸ್ಥಳದಲ್ಲಿ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.ವಿಷಯ ತಿಳಿದು ಬೆಂಗಳೂರಿನಿAದ ನೇರವಾಗಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕರು ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದರಲ್ಲದೇ ವೈದ್ಯರಿಂದ ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ಮಾಡಿ ಮೃತ ದೇಹವನ್ನು ಕುಟುಂಬಸ್ಥರಿಗೆ ಅಸ್ತಾಂತರಿಸುವAತೆ ಸೂಚನೆ ನೀಡಿದರು.ಇನ್ನು ಇದೇ ವೇಳೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬರವಸೆ ನೀಡಿದ ಶಾಸಕರು ಮೃತ ಕುಟುಂಬಕ್ಕೆ ದುಖಃ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.ಈ ಸಂಬAಧ ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಗರ್‌ಹುಕ್ಕುಂ ಕಮಿಟಿಯ ಅಧ್ಯಕ್ಷ ನಾಗರಾಜ್, ಗ್ರಾ.ಪಂ ಸದಸ್ಯ ಕುಬೇರಪ್ಪ, ಪಿ.ಕುಮಾರ್, ಓದಪ್ಪ,ಕುಮಾರ್,ದೊಡ್ಡೇರಹಳ್ಳಿ ಗದ್ದಿಗೆಪ್ಪ ಸೇರಿದಂತೆ ಗ್ರಾಮಸ್ಥರಿದ್ದರು.ಚಿತ್ರಸುದ್ದಿ : ಸಿಡಿಲು ಬಡಿದು ಮೃತ ಪಟ್ಟ ಕುರಿಗಾಯಿ ಮೃತ ದೇಹವನ್ನು ಸಿಎಂ ರಾಜಕೀಯ ಎಂ.ಪಿ.ರೇಣುಕಾಚಾರ್ಯ ವೀಕ್ಷಣೆ ಮಾಡಿ, ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.