ಕುರಿಗಾಯಿಗಳಿಗೆ ಸವಲತ್ತು ನೀಡಿದ ಸಿದ್ದರಾಮಯ್ಯ – ಚಿದ್ರಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು26: ದೇಶದಲ್ಲಿ ಕುರಿಗಾಯಿಗಳಿಗೆ ಎಲ್ಲೂ ಇಲ್ಲದ ಸವಲತ್ತುಗಳನ್ನು ನೀಡಿದ ಸಿದ್ದರಾಮಯ್ಯ ರವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಕುರಿ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ  ಪಂಡಿತರಾವ್ ಚಿದ್ರಿ ಹೇಳಿದರು.
ಈ ಕುರಿತು ಮಂಗಳವಾರ ಹೊಸಪೇಟೆಯ ಪತ್ರಿಕಾಭವನದಲ್ಲಿ  ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅತ್ಯಂತ ಲಾಭದಾಯಕ ಉದ್ಯಮವಾದರೂ ಬಹಳಷ್ಟು ಕುರಿಗಾಯಿಗಳಿಗೆ ಮಾಹಿತಿಯ ಕೊರತೆ ಸವಲತ್ತು ಪಡೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅನೇಕ ಸೌಕರ್ಯ ಗಳನ್ನು ಮಾಹಿತಿ ತಿಳಿಯುವಂತೆ ಮಾಡಿದ್ದಾರೆ. ಎಂದರು. ಇಂದು ಸಹಕಾರಿ ಸಂಘಗಳ ಮೂಲಕ ಕುರಿ ಸಂರಕ್ಷಣೆ ಗೆ ವ್ಯವಸ್ಥೆಯನ್ನು ರೂಪಿಸಿದ್ದಾರೆ ಎಂದರು.
ಕುರಿ ಸಂರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ, ಕುರಿಯನ್ನು ಕೇವಲ ಸಾಂಪ್ರದಾಯಿಕ ವೃತ್ತಿಯಾಗಿಸದೆ ಉದ್ಯಮವಾಗಿ ಮಾಡುವ ಬೆಳೆಸಲು ವೃತ್ತಿ ತರಬೇತಿ, ಸಂರಕ್ಷಣಾ ಕ್ರಮ ಮಾರಾಟ ಕೌಶಲ್ಯ ಸೇರಿದಂತೆ ವ್ಯವಸ್ಥಿತ ಉದ್ಯಮ ನಿರ್ವಹಣೆಯನ್ನು ಮಾಡುವ ಮೂಲಕ ಯಶಸ್ವಿ ಉದ್ಯಮವಾಗಿ ಮಾಡಲು ಸಿದ್ದರಾಮಯ್ಯನವರ ಅಮೃತ ಮಹೋತ್ಸವ ದಲ್ಲಿ ಪಾಲ್ಗೊಂಡು ಕೃತಜ್ಞತೆಯನ್ನು ಸಲ್ಲಿಸಲು ರಾಜ್ಯದ 25 ಜಿಲ್ಲೆಯ ಅಂದಾಜು 1ಲಕ್ಷ ಜನ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳಲಿದ್ದಾರೆ ಎಂದರು.
ಉತ್ತಂಗಿ ಕನಕದಾಸ ಕುರಿಗಾಯಿ ಸಹಕಾರಿ ಸಂಘದ ಅಧ್ಯಕ್ಷ ಕೆ.ಜಿ.ಹನುಮಂತಪ್ಪ, ಉಜ್ಜನಿ ರುದ್ರಪ್ಪ ಹಾಜರಿದ್ದರು.