ಕುರಿಗಳ ಮೈ ತೊಳೆಯಲು ಹೋಗಿ ನೀರು ಪಾಲಾದ ಬಾಲಕ

ಇಂಡಿ.ನ 15:ಭೀಮಾನದಿಯಲ್ಲಿ ಕುರಿಗಳ ಮೈ ತೊಳೆಯಲು ಹೋದ ಬಾಲಕನೊಬ್ಬ ನೀರು ಪಾಲಾದ ಘಟನೆ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶಿವಪ್ಪ ಕರೆಪ್ಪ ಪೂಜಾರಿ (ನಿಂಬಾಳ) ಎಂದು ಗುರುತಿಸಲಾಗಿದೆ.ದೀಪಾವಳಿ ಹಬ್ಬದ ಆಚರಣೆಯ ಪ್ರಯುಕ್ತ ಕುರಿಗಳ ಮೈ ತೊಳೆದು ಅಲಂಕರಿಸಿ ಊರಿನ ದೇವಸ್ಥಾನಗಳ ಎದುರು ಅವುಗಳನ್ನು ಓಡಿಸುವ ಸಂಪ್ರದಾಯ ಅಗರಖೇಡ ಗ್ರಾಮದಲ್ಲಿದೆ .ಈ ಹಿನ್ನೆಲೆಯಲ್ಲಿ ಕುರಿಗಳ ಮೈ ತೊಳೆಯಲು ಭೀಮಾ ನದಿಗೆ ತನ್ನ ತಂದೆಯ ಜೊತೆಗೆ ಹೋದಾಗ ದುರ್ಘಟನೆ ಸಂಭವಿಸಿದೆ. ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.