
ಬೀದರ :ಮೇ.4:ಪವಿತ್ರ ರಂಜಾನ ಹಬ್ಬದಲ್ಲಿ ಒಂದು ತಿಂಗಳಕಾಲ ಉಪವಾಸ ಮಾಡಿ ದೇವರ ಆಜ್ನೆ ಪಾಲಿಸಿ ನಂತರ ಈದ್ ಮಿಲನ್ ಸ್ನೇಹಕೂಟ ರಂಜಾನ ಹಬ್ಬದ ಸಂದೇಶ ಸರ್ವರಿಗೂ ಮುಟ್ಟಿಸಬೇಕು ಕುರಾನ ಶಾಂತಿ ಸಂದೇಶ ಎಲ್ಲರೂ ಪಾಲಿಸಿದರೆ ಜಗತ್ತಿಗೆ ಶಾಂತಿ ಲಭಿಸುತ್ತದೆ ಸಿ.ಎ.ಇಸ್ಪಾಕ ಪೂತ್ತೂರ ರವರು ಬೀದರ ನಗರದ ಡಾ. ಚೆನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಕಾರ್ಯಕ್ರಮದ ಅಧ್ಶಕ್ಷತೆವಹಿಸಿ ಮಾತನಾಡಿದ ಅವರು ಮಹ್ಮದ ಪ್ಯೆಗಂಬರ ಸಂದೇಶಗಳಾದ ನಮ್ಮ ನಾಲಿಗೆ ಹರಿಬಿಡದೇ ಹಿಡಿತದಲ್ಲಿಡುವದು ಪರನಿಂದೆ ಮಾಡದಿರುವದು ಸತ್ಶದ ಪರವಾಗಿ ನೀಲ್ಲುವದು ಭಯೋತ್ಪಾದನೆ ಕೋಲೆ ಸುಲಗೆ ಹಿಂಸೆ ಖಂಡಿಸುವದಾಗಿದೆ ಎಂದು ಇಸ್ಪಾಕ ನುಡಿದರು.
ದಿವ್ಶ ಸಾನಿಧ್ಶವಹಿಸಿದ ಕ್ರೈಸ್ತ ಧರ್ಮಧ ನೆಲ್ಸನ ಸುಮಿತ್ರ ಮೇಥೋಡಿಸ್ಟ ಚರ್ಚ ಬೀದರರವರು ಮಾತನಾಡಿ ಜಗತ್ತಿನಲ್ಲಿ ಎಲ್ಲಿಯೂಶಾಃತಿ ಇಲ್ಲ ಶಾಂತಿ ನೆಲಸಬೇಕಾದರೆ ಏಸು ಸ್ವಾಮಿ ಸಂದೇಶದಂತೆ ಎಲ್ಲರನ್ನೂ ಪ್ರೀತಿಸಿ ಗ್ವೌರವಿಸುವ ಗುಣ ನಮ್ಮಲ್ಲಿ ಬೆಳಿಯಿಸಿಕೊಯಳ್ಳಬೇಕು ಎಂದರು.
ಭಾಲ್ಕಿ ಹಿರೇಮಠದ ಮಹಾಲಿಂಗ ದೇವರು ಮಾತನಾಡಿ ಎಲ್ಲರೂ ಸಣ್ಣವಿಚಾರಬಿಟ್ಟು ಬಸವಣ್ಣನವರು ಸೂಫೀಸಂತರು ಹೆಳಿದಂತೆ ಕಾಯಕ ದಾಸೋಹ ತತ್ವದಂತೆ ನಡೆಯಬೇಕು ಧನಸಂಪಾದನೆ ಪಮ್ಮಗುರಿಯಲ್ಲ ಧರ್ಮದ ತತ್ವಸಂಪಾದನೆಯಂತೆ ನಡೇಯಬೇಕೆಂದರು.
ಗುರುದ್ವಾರ ಪ್ರಬಂಧಕ ಕಮಿಟಿ ಜ್ಞಾನಿ ದರಬಾರಸಿಂಗ, ಮಹ್ಮದ ರಫೀಕಸಾಬ, ಮೌಲ್ವಿ ಮೊಹ್ಮದ್ ಫೈಮೊದ್ದಿನ್ ಮಾತನಾಡಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖದೀರ್, ಮೊಹ್ಮದ ಆಸಿಫೋದ್ದಿನ್, ಮೌಲನಾ ಅಬ್ದುಲ್ ಗನಿ ಖಾನ್, ಸೈಯದ ಶಾಹ ಅಸದುಲ್ಲಾ ಹುಸ್ಸೇನಿ, ಡಾ. ಹುಸ್ಸಾಮುದ್ದಿನ್ ಉಝೈರ,Á್ರಜೆಂದ್ರ ಕುಮಾರ ಗಂದಗೆ, ಮೊಹ್ಮದ್ ಅಕ್ರಮ ಅಲಿ, ಸುಮಂತ ಕಟ್ಟಿಮನಿ, ಮೊಹ್ಮದ್ ಸೈಫೊದ್ದಿನ್, ನಫುರಾ ಅಂಜುಮ, ಸೈಯದ್ ಅಬ್ದುಲ್ ಸತ್ತಾರ, ಶ್ರಿಮತಿ ನಸಿಮುನ್ನಿಸಾ ಸೇರಿದಂತೆ ಇನ್ನಿತ್ತರು ಇದ್ದರು.
ಸ್ವಾಗತ ಮತ್ತು ಪ್ರಾಸ್ತಾವಿಕ ಗುರುನಾಥ ಗಡ್ಡೆ ಮಾಡಿದರೆ ಸಂಚಾಲನೆಯನ್ನು ನಿಜಾಮೋದ್ದಿನ್ ಮಾಡಿದರು, ವಂದನಾರ್ಪಣೆಯನ್ನು ಸ್ಯಯದ್ ಅಬ್ದುಲ್ ಸತ್ತಾರ ಮಾಡಿದರು.