ಕುಮ್ಮಕ್ಕು ಕೊಡುವುದು ನಿಲ್ಲಲಿ: ಅಶ್ವಥ್ ನಾರಾಯಣ

ಮೈಸೂರು: ಜೂ.07:- ಕಾಂಗ್ರೆಸ್ ಸರ್ಕಾರ ಬಂದ ಜೋಷ್‍ನಲ್ಲಿ ಇಂತಹ ಘಟನೆಗಳನ್ನು ಮಾಡುವುದು ಅಥವಾ ಕುಮ್ಮಕ್ಕು ಕೊಡುವುದು ನಿಲ್ಲಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡುವ ಕೆಲಸವೂ ಆಗಬೇಕೆಂದು ಎಂದು ಮಾಜಿ ಸಚಿವ ಅಶ್ವಥ್‍ನಾರಾಯಣ ಹೇಳಿದರು.
ನಂಜನಗೂಡು ಪಟ್ಟಣದಲ್ಲಿ ಕ್ಷುಲಕ ವಿಚಾರಕ್ಕೆ ಹಲ್ಲೆಗೊಳಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿರುವ ನಂಜನಗೂಡು ನೀಲಕಂಟನಗರ ನಿವಾಸಿ ಯುವಕ ಪ್ರಸಾದ್‍ರನ್ನು ಭೇಟಿ ನೀಡಿ ಅವರು ಮಾತನಾಡಿದರು. ನಂಜನಗೂಡಿನ ನೀಲಕಂಠನಗರದಲ್ಲಿರುವ ನಿಂಗಣ್ಣ ವೃತ್ತದಲ್ಲಿ ಹಿಂದಿನಿಂದಲೂ ಸಾಮಾನ್ಯವಾಗಿ ಯಾವುದೇ ಆಚರಣೆಯನ್ನು ಮಾಡುತ್ತಾ ಬರಲಾಗಿದೆ. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಜೋಷ್‍ನಲ್ಲಿ ಇಂತಹ ಘಟನೆ ನಡೆದಿದೆ. ಈ ಹಿಂದೆ ಹೀಗೆ ಇರಲಿಲ್ಲ. ಇಂತಹ ಘಟನೆಗಳು ನಿಲ್ಲಬೇಕು, ಶಾಂತಿ ಕಾಪಾಡಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು. ಅಸ್ತ್ರಗಳನ್ನು ಬಳಕೆ ಮಾಡುವುದು. ಅಮಾಯಕರ ಮೇಲೂ ಹಲ್ಲೆ ನಡೆಸುವುದು ನಿಲ್ಲಬೇಕು. ಒಟ್ಟಾರೆ ಶಾಂತಿ ಕಾಪಾಡುವುದು ಆಗಬೇಕಿದೆ ಎಂದರು.
ಒಟ್ಟಾರೆ ಯಾರು ಮಾಡಿದ್ದಾರೆಂಬುದು ಆತನಿಗೂ ಗೊತ್ತಿದೆ. ಆತನ ಒಂದೇ ಒಂದೂ ಕೋರಿಕೆ ಎಂದರೆ ಆತನಿಗೆ ಯಾರು ಹಲ್ಲೆ ನಡೆಸಿದ್ದಾರೋ ಅವರಿಗೆ ಶಿಕ್ಷೆ ಆಗಬೇಕೆಂಬುದು. ಅದು ಆಗಬೇಕಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ನಾಯಕರ ಭೇಟಿ
ನಂಜನಗೂಡು ಪಟ್ಟಣದಲ್ಲಿ ಹುಟ್ಟುಹಬ್ಬ ಆಚರಣೆ ವೇಳೆ ಅನ್ಯ ಕೋಮಿನ ಯುವಕರ ಗುಂಪು, ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರ ತಂಡ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ವಿವರ: ಭಾನುವಾರ ರಾತ್ರಿ ನಂಜನಗೂಡು ಪಟ್ಟಣದ ನೀಲಕಂಠ ನಗರದ ಸರ್ಕಲ್‍ನಲ್ಲಿ ಏರಿಯಾದ ಹುಡುಗರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಚಾಕು ಇರಿತಕ್ಕೊಳಗಾದ ಯುವಕ ಬಜ್ಜಿಯನ್ನು ತಿನ್ನಲು ಮನೆಯಿಂದ ಸರ್ಕಲ್?ಗೆ ಬಂದಿದ್ದಾನೆ. ಯುವಕರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದಾರೆ.
ಈ ವೇಳೆ ಅಲ್ಲಿಗೆ ಬಂದ 5 ಜನ ಅನ್ಯ ಕೋಮಿನ ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕ್ಯಾತೆ ತೆಗೆದಿದ್ದಾರೆ. ನಂತರ ಪ್ರಸಾದ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು, ಹಣೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಶೋಹೆಬ್, ಇಲ್ಲು, ಸಲ್ಮಾನ್, ಜಾಫರ್ , ಇಸ್ಮಾಯಿಲ್ ಎಂಬ ಐದು ಜನರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೆÇಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಕು ಇರಿತಕ್ಕೊಳಗಾದ ಯುವಕ ಪ್ರಸಾದ್ ಮಾತನಾಡಿ, ನಾನು ಬಜ್ಜಿ ತಿನ್ನಲೆಂದು ನೀಲಕಂಠ ನಗರದ ಸರ್ಕಲ್‍ಗೆ ಹೋಗಿದ್ದೆ, ಅಲ್ಲಿ ನನಗೆ ಪರಿಚಯದ ಹುಡುಗರು ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೇಕ್ ಕತ್ತರಿಸಿದ ಸಂದರ್ಭದಲ್ಲಿ ಯಾರೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. ಆಗ ಅನ್ಯಕೋಮಿನ ಯುವಕರು ಅಲ್ಲೇ ಇದ್ದ ನನ್ನ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ.
ಒಬ್ಬ ವ್ಯಕ್ತಿ ಚಾಕುವಿನಿಂದ ಇರಿದ, ಇನ್ನೊಬ್ಬ ಹಣೆಗೆ ಪಂಚ್ ಮಾಡಿದ. ಆಗ ನಾನು ಗಾಬರಿಯಿಂದ ನೆಲಕ್ಕೆ ಬಿದ್ದೆ. ತಕ್ಷಣ ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಮಾಹಿತಿ ನೀಡಿದರು. ಈ ಬಗ್ಗೆ ಜಿಲ್ಲಾ ಪೆÇಲೀಸ್? ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರ ಭೇಟಿ: ಇನ್ನು ನಂಜನಗೂಡಿನಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಾಜ್ಯ ಬಿಜೆಪಿ ರಚನೆ ಮಾಡಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಸೂಚನೆ ನೀಡಿದೆ.
ನಂಜನಗೂಡಿನಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡಲು ಬಿಜೆಪಿಯಿಂದ ತಂಡ ರಚನೆ ಮಾಡಲಾಗಿದೆ. ಇದಕ್ಕಾಗಿ ಐವರು ಸದಸ್ಯರ ತಂಡ ರಚನೆ ಮಾಡಲಾಗಿದ್ದು, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್ ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಮಹೇಶ್ ಅವರನ್ನೊಳಗೊಂಡ ತಂಡಕ್ಕೆ ಶೀಘ್ರವೇ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಂಡ ಮಂಗಳವಾರ ಸಂಜೆ ಕೆ.ಆರ್.ಆಸ್ಪತ್ರೆಗೆ ಭೇಟಿನೀಡಿ ಯುವಕನಿಂದ ಮಾಹಿತಿ ಪಡೆದಿದ್ದಾರೆ.