ಕುಮಿತೆ ಫೈಟ್ :ಜಮುನಾ ಶುಕ್ಲಾಗೆ ಕಂಚಿನ ಪದಕ, ಸನ್ಮಾನ

ಕಲಬುರಗಿ:ಸೆ.28: ಸೆ. 19ರಿಂದ 24ರವರೆಗೆ ಇಂಡೋ ನೇಷಿಯಾದ ಟೆನಿಸ್ ಇಂಡೋರ್ ಸ್ಟೇಡಿಯಂ ಜಕಾರ್ತಾದಲ್ಲಿ ನಡೆದ ವಿಶ್ವ ಶೀಟೂರ್ಯು ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ 35 ದೇಶಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಕಲಬುರಗಿಯಿಂದ ಸ್ಪರ್ಧೆಯಲ್ಲಿ ಕಲಬುರಗಿಯಿಂದ ಭಾಗವಹಿಸಿದ್ದ ಅಂತರರಾಷ್ಟ್ರೀಯ ಪಟು ಜಮುನಾ ಕೆ ಶುಕ್ಲಾ ಅವರಿಗೆ ಕಂಚಿನ ಪದಕ ಲಭಿಸಿದೆ.
ಜೈಹಿಂದ ಸ್ಪೋಡಸ್ ಕರಾಟೆ ಅಸೋಶಿಯನ್ ಕರ್ನಾಟಕ ಅಧ್ಯಕ್ಷರಾದ ಸೇನ್ಸಾಯಿ ಲಕ್ಷ್ಮೀಕಾಂತ ಧುಮ್ಮಸೂರ ಹಾಗೂ ಪ್ರಧಾನ ಕಾರ್ಯದಶಿ ರಾಜೇಶ ಕಟ್ಟಿಮನಿ ಹಾಗೂ ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯವರು ಜಮುನಾ ಸಾಧನೆಗೆ ಹರ್ಷ ವ್ಯಕ್ತಡಿಸಿದ್ದಾರೆ.
ಬುಧುವಾರ ನಗರಕ್ಕೆ ಆಗಮಿಸಿರುವ ಜಮುನಾ ಕೆ ಶುಕ್ಲಾ ಅವರಿಗೆ ನಗರದ ಎಸ್.ವಿ.ಪಿ. ವೃತ್ತದಲ್ಲಿ ಜೈಹಿಂದ ಸ್ಪೋಟ್ಸ್ ಕರಾಟೆ ಡೋ ಅಸೋಶಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.