ಕುಮಾರ ಸ್ವಾಮಿ ಕಪ್ಪಗೆ ಇರೊದ್ರಿಂದ ಕರಿಯ ಎಂದರೆ ತಪ್ಪೇನು: ಜಮಿರ್ ಪ್ರಶ್ನೆ

ಬೀದರ:ಎ.8: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಸಂಬೋಧಿಸಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೀದರ್ ನಲ್ಲಿ ಮಾತನಾಡಿದ ಜಮೀರ್, “ಕುಮಾರಸ್ವಾಮಿ ಇರೋದೇ ಕಪ್ಪು, ಬೆಳ್ಳಗೆ ಇದ್ದವರನ್ನು ಕರಿಯ ಅಂದಿದ್ದರೆ ತಪ್ಪು, ಅವರು ಕಪ್ಪು ಇರೋದರಿಂದಲೇ ಅವರನ್ನು ‘ಕರಿಯ’ ಎಂದು ಕರೆದೆ. ಇದು ತಪ್ಪು ಎಂದಾದರೆ ನನ್ನ ಮೇಲೆ ದೂರು ನೀಡಲಿ” ಎಂದು ಜಮೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕುಮಾರಸ್ವಾಮಿಯವರು ಅಮೇರಿಕಾದವರ ಹಾಗೆ ಇದ್ದಿದ್ದರೆ, ನನ್ನ ಹೇಳಿಕೆ ತಪ್ಪಾಗುತ್ತಿತ್ತು. ಭಗವಂತ ಅವರನ್ನು ಹುಟ್ಟಿದಾಗಲೇ ಕರ್ರಗೆ ಮಾಡಿ ಭೂಮಿಗೆ ಕಳುಹಿಸಿದ್ದಾರೆ, ಹಾಗಾಗಿ ಅವರು ಕಪ್ಪಗೆ ಇದ್ದಾರೆ. ಈಗ ಹೇಳಿ ನನ್ನ ಹೇಳಿಕೆ ಹೇಗೆ ತಪ್ಪಾಗುತ್ತದೆ..?” ಎಂದು ಜಮೀರ್ ಪ್ರಶ್ನಿಸಿದರು.ನನ್ನನ್ನು ‘ಕುಳ್ಳ’ ಎಂದು ಕರೆಯುತ್ತಾರೆ, ನನಗೆ ದೇವರು ಎತ್ತರ ಕೊಟ್ಟಿಲ್ಲ, ಹಾಗಾಗಿ ನನ್ನನ್ನು ಕುಳ್ಳ ಎಂದು ಕರೆದರೆ ನನಗೆ ಬೇಸರವಿಲ್ಲ” ಎಂದು ಜಮೀರ್ ಅಹ್ಮದ್ ಹೇಳಿದರು.