ಕುಮಾರ ನಾಯಕ ಪರ ದೇವಿ ನಾಯಕ ಮತಯಾಚನೆ

(ಸಂಜೆವಾಣಿ ವಾರ್ತೆ)
ರಾಯಚೂರು, ಏ.೨೬-
ತಾಲೂಕಿನ ಗಣಮೂರು ಗ್ರಾಮದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀದೇವಿ ನಾಯಕ ಮಂಜುಳಾ ಮತ್ತು ಅಮರೇಶ ಅವರು ನರೇಗಾ ಕಾಮಗಾರಿ ಕೂಲಿ ಕಾರ್ಮಿಕರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಅವರಿಗೆ ಬೆಂಬಲ ನೀಡುವಂತೆbem ಮನವಿ ಮಾಡಿಕೊಂಡರು.ಬಡವರು,ದಿನ ದಲಿತರು ಅಲ್ಪಸಂಖ್ಯಾತ ದುಡಿಯುವ ವರ್ಗಕ್ಕೆ ಸವಲತ್ತು ಕೊಡುವ ಕಾಂಗ್ರೆಸ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದರು.ಚಂದ್ರಬಮಡಾ ಜಿ.ಪಂ.ವ್ಯಾಪ್ತಿಯ ಗಟಮೂರು ಗ್ರಾಮದಲ್ಲಿ ಮಹಿಳಾ ಕೂಲಿಕಾರ್ಮಿಕರಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡುವುದರ ಮೂಲಕ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಬೇಕು ಎಂದರು.ವಿದ್ಯುತ,ಬಸ್ ಉಚಿತವಾಗಿ ನೀಡಿದೆ.ಬಡತನದ ನಿವಾರಣೆಗೆ ಎರಡು ಸಾವಿರ ಕೊಡುತ್ತಿದೆ. ಈಗ ಕೇಂದ್ರದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಒಂದು ಲಕ್ಷ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುವುದು ಎಂದರು.
ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಅತ್ಯಂತ ಪ್ರಾಮಾಣಿಕ ಮತ್ತು ಜನಪರ ಕಾಳಜಿ ಹೊಂದಿದ ವ್ಯಕ್ತಿ ಅವರನ್ನು ಬಹುಮತಗಳ ಅಂತರದಲ್ಲಿ ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು. ಸುಳ್ಳಿನ ಸರಕಾರ ಬಿಜೆಪಿಯನ್ನು ದೇಶದಿಂದ ಸೋಲಿಸುವ ಅವಕಾಶ ಬಂದಿದೆ. ಆದರಿಂದ ಕುಮಾರ ನಾಯಕರನ್ನು ಬೆಂಬಲಿಸುವಂತೆ ಕೋರಿದರು.