ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09:  ನಗರದ  ವೀ.ವಿ ಸಂಘದ  ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದಲ್ಲಿ ನಿನ್ನೆ ವಿಶ್ವ ಮಹಿಳಾ ದಿನ ಆಚರಿಸಲಾಯಿತು.
ಇದರ ಮುಖ್ಯ ಅತಿಥಿಗಳಾಗಿ ಎಸ್. ಪುಷ್ಪಲತ ಆರ್ಟ್ ಆಫ್ ಲೀವಿಂಗ್ ನ ಜಿಲ್ಲಾ ಸಂಚಾಲಕರು , ಡಾ.ಉಮಾ ವಲ್ಲಿ ಆರ್ಟ್ ಆಫ್ ಲೀವಿಂಗ್ ನ ಆರೋಗ್ಯ ಶಿಕ್ಷಣ ನೀಡುವವರು ಮತ್ತು ಶಿಕ್ಷಕಿಯಾದ ವನಜಾಕ್ಷಿ ಪಾಲ್ಗೊಂಡಿದ್ದರು.
ಮಹಿಳೆಯರ ಜೀವನದಲ್ಲಿ ಏರಿಳಿತಗಳು ಸರ್ವೇ ಸಾಮನ್ಯ ಇವುಗಳನ್ನು ಸಮಾನ ರೀತಿಯಿಂದ ಸ್ವೀಕರಿಸಿ  ಮಹಿಳೆಯರು ಮುಂದೆ ಬರಬೇಕೇಂದು ಕರೆ ನೀಡಿದರು . ಮಹಿಳೆಯರಿಗೆ ಮತ್ತು  ವಿದ್ಯಾರ್ಥಿನಿಯರಿಗೆ ಸಂವಹನ ತರಬೇತಿ ಅಗತ್ಯ ಮಹಿಳೆಯರಿಗೆ ನಿವೃತ್ತಿ ಎನ್ನುವುದೇ ಇಲ್ಲ ಜೀವನದ ಗುರಿ ಮುಟ್ಟಲು ಸಹನೆ ಸಂಸ್ಕಾರ ಮತ್ತು ಶಿಕ್ಷಣ ಅವಶ್ಯಕ ಎಂದು ತಿಳಿಸಿದರು. ಇದರಲ್ಲಿ ಯಾವುದಾದರು ಇಲ್ಲದಿದ್ದರೆ ನಮ್ಮೆಲ್ಲರ ಬದುಕು ಶೂನ್ಯ ಎಂದು ಅವರು ತಿಳಿಸಿದರು
ಕಾಲೇಜ್ ನ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಂ.ಕಿರಣ್ ಕುಮಾರ್‍, ಪುರುಷರಿಗೆ  ಒಂದು ಜನ್ಮವಿದ್ದರೆ ಮಹಿಳೆಯರಿಗೆ ಪ್ರತಿ ತಾಯ್ತನದಲ್ಲಿ ತಮ್ಮ ಜೀವ ಒತ್ತೆ ಇಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ ಆದ್ದರಿಂದ ಹೆಣ್ಣಿನ ಜನ್ಮ ಬಹಳ ಶ್ರೇಷ್ಠವಾದದ್ದು ಎಂದು ತಿಳಿಸಿದರು ವೀ.ವಿ ಸಂಘದ ಸಹ ಕಾರ್ಯದರ್ಶಿ ದರೂರು ಶಾಂತವೀರನಗೌಡ ರವರು ಮಾತನಾಡುತ್ತಾ ಮಹಿಳೆಯರ ವಿದ್ಯಾಭ್ಯಾಸ ಮತ್ತು ಸಮಾನತೆಯು ಈಗಿನದಲ್ಲ 12 ನೆ ಶತಮಾನದಲ್ಲಿ ವಿಶ್ವಗುರು ಬಸವೇಶ್ವರು ಅಕ್ಕ ಮಹಾದೇವಿಯವರಿಗೆ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಂಡರು. ಸದಸ್ಯರಾದ ಹಲಕುಂದಿ ವಿಜಯಕುಮಾರ್, ಎ.ವೀರನಗೌಡ, ಸಂಗನಕಲ್ ಚಂದ್ರಶೇಖರ್, ಇದ್ದರು.
ವಂದನಾರ್ಪಣೆ ಉಪ ಪ್ರಾಂಶುಪಾಲ ಗೌಸೀಯಾ ಬೇಗಂ ಮಾಡಿದರು.