ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ 3.31 ಲಕ್ಷ ರೂಪಾಯಿಗಳ ದೇಣಿಗೆ


ಬಾಗಲಕೋಟೆ, ಮೇ 18 : ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲೆಯ ಇಲಕಲ್ ಪಟ್ಟಣದ ಅರಿಹಂತ ಮಿನರಲ್ಸ್‍ನ ಮಾಲೀಕರಾದ ರಾಜು ಬೋರಾ ಅವರು 3.31 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ರಾಜು ಬೋರಾ ಅವರು ಮೇ 17 ರಂದು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರು ಮತ್ತು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರಿಗೆ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಅಗತ್ಯದ ಉಪಕರಣಗಳನ್ನು ಖರೀದಿಸಲು 3.31 ಲಕ್ಷ ರೂಪಾಯಿಗಳ ಚೆಕ್ ನೀಡಿದರು. ಚೆಕ್ ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ಚರಂತಿಮಠ ಅರಿಹಂತ ಮಿನರಲ್ಸ್‍ನ ರಾಜು ಬೋರಾ ಅವರ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಈ ಸಂದರ್ಭ ಬಿ.ವಿ.ವಿ.ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ಬಿ.ವಿ.ವಿ.ಸಂಘದ ಸದಸ್ಯರಾದ ರವಿ ಸರದೇಸಾಯಿ ಮತ್ತು ಅಶೋಕ ರೇಣುಕಪ್ಪ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ.ಎಸ್.ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಆಶಾಲತಾ ಮಲ್ಲಾಪೂರ ಮತ್ತು ಡಾ.ನವೀನ ಚರಂತಿಮಠ ಉಪಸ್ಥಿತರಿದ್ದರು.