ಕೋಲಾರ,ಮಾ,೨೮-ಮೇ ತಿಂಗಳ ಎರಡನೇ ವಾರ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಹೊಸ ಸರಕಾರವು ರಚನೆಯಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು ಮತ್ತಷ್ಟು ಅನುದಾನ ತಂದು ಕೋಲಾರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.
ನಗರದ ಹೊರವಲಯದ ಪೇಟೆಚಾಮನಹಳ್ಳಿಯಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿ ರಾಷ್ರ್ಟೀಯ ಹೆದ್ದಾರಿಯಿಂದ ಚೌಡೇಶ್ವರಿ ನಗರದವರೆಗೂ ೭೦ ಲಕ್ಷದ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯ ಸರಕಾರವು ಎಂಎಲ್ಸಿಗಳಿಗೆ ಅನುದಾನ ಕಡಿಮೆ ಪ್ರಮಾಣದಲ್ಲಿ ನೀಡಿದ್ದಾರೆ ಅದು ಯಾವುದಕ್ಕೂ ಸಾಲದಾಗಿದೆ ಸರಕಾರವನ್ನು ಎಷ್ಟು ಬಾರಿ ಒತ್ತಡ ಹಾಕಿದರೂ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಾರೆ ನಮ್ಮದೇ ಪಕ್ಷದ ಸರಕಾರವಿದ್ದರೆ ಕೇಳಿದಷ್ಟು ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ದಿ ನಿಧಿ ಹಾಗೂ ಬಯಲು ಸೀಮೆ ಅಭಿವೃದ್ದಿ ನಿಗಮದಿಂದ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಿ ವಿವಿಧ ಯೋಜನೆಗಳಡಿ ಅನುದಾನ ತಂದು ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಸರಕಾರಿ ನೂತನ ಕಾಲೇಜು ಅಭಿವೃದ್ಧಿ, ಎಸ್.ಎನ್.ಆರ್, ಜಿಲ್ಲಾ ಆಸ್ಪತ್ರೆಯಲ್ಲಿ ಅನೇಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ, ಜಿಲ್ಲೆಯ ಮತ್ತಷ್ಟು ಅಭಿವೃದ್ದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಅಷ್ಟೇ ಎಂದರು.
ಕಾಮಗಾರಿಯೂ ಆದಷ್ಟು ಬೇಗ ಮುಗಿಸಲಾಗುತ್ತದೆ, ರಸ್ತೆಯಲ್ಲಿ ಏನಾದರೂ ಒತ್ತುವರಿಯಾಗಿದ್ದರೆ ಸರ್ವೆ ಮಾಡಿಸಿ ಗುಣಮಟ್ಟದ ರಸ್ತೆ ಮಾಡಲಾಗುತ್ತದೆ ಎಂದರು.
ಕೋಲಾರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮಾಜಿ ನಗರಸಭೆ ಸದಸ್ಯ ರಾಧಾಕೃಷ್ಣ, ಮುಖಂಡರಾದ ಸಿಎಂಆರ್ ಹರೀಶ್, ವೆಂಕಟರಾಮೇಗೌಡ, ಸುಬ್ರಮಣಿ, ಮುನಿಕೃಷ್ಣ, ಅನಿಲ್ ಕುಮಾರ್, ಹರೀಶ್, ರಮೇಶ್, ರಾಜಣ್ಣ, ಸುರೇಶ್, ಮಂಜುನಾಥ್, ರಂಜಿತ್, ಪುನೀತ್ ಇದ್ದರು.