ಕುಮಾರಸ್ವಾಮಿಗೆ ಅಭಿನಂದನೆ

ಮೈಸೂರು:ಜ:10: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಲುಮತ ಮಹಾಸಭಾ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರಸಿದ್ಧ ಕಂಸಾಳೆ ಕಲಾವಿದರಾದ ಶ್ರೀ ಕುಮಾರಸ್ವಾಮಿರವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಡಾ . ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪೆÇ್ರ .ನಾಗೇಶ್ ವಿ . ಬೆಟ್ಟಕೋಟೆ ರವರು ಕುಮಾರಸ್ವಾಮಿರವರಿಗೆ ಶಾಲೂ ಒದಿಸಿ, ಮೈಸೂರು ಪೇಟಾ ತೊಡಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ . ಶಿವರಾಮು, ಡಾ . ಸಿ . ವೆಂಕಟೇಶ್ , ಡಾ. ಕೆ. ವಸಂತ್‍ಕುಮಾರ್ , ಎಂ. ವಿಜಯ್ ಕುಮಾರ್, ಲೋಕೇಶ್ ಕುಮಾರ್ ಎಂ , ಆರ್.ಕೆ. ರವಿ , ರೋಹಿತ್ , ಎಂ . ಮಹೇಂದ್ರ ಕಾಗಿನೆಲೆ , ದೀಪಕ್ ಪುಟ್ಟಸ್ವಾಮಿ , ಕಂಸಾಳೆ ರೇವಣ್ಣ, ಸಂಸಾಳ ರವಿಚಂದ್ರ, ಶಶಿರಾಜ್ ಎಂ.ಎನ್ , ಸ್ವಾಮಿ (ದಾಸ) , ಹರೀಶ್ ಮೊಗಣ್ಣ, ಕಾಡನಹಳ್ಳಿ ಡಿ.ಸ್ವಾಮಿಗೌಡ , ಕಂಸಾಳೆ ಕುಮಾರ್, ಸದಾನಂದ ಎಂ.ಸಿ. ಚಿಕ್ಕಣ್ಣ , ಸುನೀಲ್ ನಾರಾಯಣ್ , ಪವನ್ ಸಿದ್ದರಾಮು ಭಾಗಿಯಾಗಿದ್ದರು.