
ಲಿಂಗಸೂಗೂರು.ಜ.೧೭- ಸಂಕ್ರಾಂತಿ ಹಬ್ಬದ ನಿಮಿತ್ಯವಾಗಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ರೈತರಿಂದ ವಿಡಿಯೋ ಕಾನ್ಸ್ ರೆನ್ಸ್ ನಡೆಸಿ ಸಿದ್ದುಬಂಡಿ ಹಾಗೂ ತಾಲ್ಲೂಕಿನ ರೈತರೊಂದಿಗೆ ನೀರಾವರಿ ಸಮಸ್ಯೆ ಗಳ ಬಗೆಗೆ ಚರ್ಚೆ ನಡೆಸಿದರು ’ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರೈತರಿಂದ ಸಂಕ್ರಾಂತಿ, ಕುಮಾರಣ್ಣನ ಜೊತೆ ವಿಡಿಯೋ ಕಾನ್ಫರೆನ್ಸ್ ಸಂವಾ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ವಾಯ್.ಬಂಡಿ ಅವರ ಜೊತೆ ರೈತರು, ಪಕ್ಷದ ಮುಖಂಡರು,ಲಿಂಗಸುಗೂರು ತಾಲೂಕಿನ ನಾರಾಯಣಪುರ ಬಲದಂಡೆ ಕಾಲುವೆ, ರಾಂಪೂರ ಏತ ನೀರಾವರಿ ಯೋಜನೆ, ನಂದವಾಡಗಿ ಹನಿ ನೀರಾವರಿ ಯೋಜನೆ ಸೇರಿದಂತೆ ನೀರಾವರಿ ಸಮಸ್ಯೆಗಳ ಕುರಿತು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಕುಮಾರಣ್ಣನವರು, ಈಗಾಗಲೇ ಜೆಡಿಎಸ್ ಪಕ್ಷವು ’ಜಲಧಾರೆ” ಕಾರ್ಯಕ್ರಮವನ್ನು ಘೋಷಿಸಿದೆ. ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರೈತ ಸಂಕ್ರಾಂತಿ.. ಕುಮಾರಣ್ಣನ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ವೈ.ಬಂಡಿ ಅವರ ಜೊತೆ ರೈತರು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಸಿದ್ದು ಬಂಡಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಮಾಕಾಪೂರ ದೊಡ್ಡ ಸಿದ್ದಯ್ಯ ತಾತನವರು ಇಮ್ಮಿಯಾಜ್ ಪಾಷಾ ಸಹದೇವಪ್ಪ ಬೀರಪ್ಪ ಅನ್ವರ್ ಅಡಿಬಾವಿ ಬಸವರಾಜ್ ಚಂದ್ರಶೇಖರ್ ನಾಯಕ್ ನಾಮದೇವ ಗುತ್ತೇದಾರ ಮೌನೇಶ್ ಆಸೀಫ್ ಜಂಬಣ್ಣ ದೊಡ್ಡಮನಿ ಯಲ್ಲಪ್ಪ ಗೊರೆಬಾಳ ರಾಘು ನಾಗರಾಜ್ ಹಾಗೂ ರೈತರು ಕಾರ್ಯಕರ್ತರು ಸೇರಿದಂತೆ ಇತರರಿದ್ದರು.