ಕುಮಾರಣ್ಣನವರು ಮಂತ್ರಿಯಾಗಿ ರಾಜ್ಯದ ಪ್ರಗತಿಗೆ ಶ್ರಮಿಸಲಿದ್ದಾರೆ


ಸಂಜೆವಾಣಿ ವಾರ್
ಸಂಡೂರು:ಜೂ: 11: ಸಂಡೂರು:ದೇಶಕ್ಕೆ 3ನೇ ಬಾರಿ ನರೇಂದ್ರಮೋದಿಯವರು ಪ್ರಧಾನಿಯಾಗುವ ಮೂಲಕ ಅಭಿವೃದ್ದಿಯ ಮುನ್ನುಡಿಯನ್ನು ಬರೆದಿದ್ದಾರೆ, ಅದಕ್ಕೆ ಪೂರಕವಾಗಿ ಜೆ.ಡಿಎಸ್. ಪಕ್ಷದ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಯಾಬಿನೆಟ್ ಮಂತ್ರಿಗಳಾಗಿ ಅಧಿಕಾರಿ ಸ್ವೀಕರಿಸಿದ್ದು ಕರ್ನಾಟಕದ ಹೆಮ್ಮೆ ಅವರಿಗೆ ಕೃಷಿ ಖಾತೆಯನ್ನು ನೀಡುವ ಮೂಲಕ ದೇಶದ ರೈತರ ಅಭಿವೃದ್ದಿಗೆ ಶ್ರಮಿಸುತ್ತಾರೆ ಎಂದು ಜೆ.ಡಿ.ಎಸ್. ತಾಲೂಕು ಅಧ್ಯಕ್ಷ ಎನ್.ಸೋಮಪ್ಪ ತಿಳಿಸಿದರು.
ಅವರು ತಾಲೂಕಿನ ಕುರೆಕುಪ್ಪ ಪುರಸಭೆಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ತಾಲೂಕು ಅಧ್ಯಕ್ಷರು ಹಾಗೂ ಪುರಕುಪ್ಪ ಪುರಸಭೆಯ ಸದಸ್ಯರಾದ ಎನ್ ಸೋಮಪ್ಪ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರು. ಕಾರ್ಯಕರ್ತರು. ಮತ್ತು ಜಾತ್ಯತೀತ ಜನತಾದಳ ಪಕ್ಷದ ಮುಖಂಡರು ಕಾರ್ಯಕರ್ತರು ಒಟ್ಟು ಗೂಡಿ ಮೋದಿ ಪ್ರಧಾನಿಯಾಗಿದ್ದು ಮತ್ತು ಹೆಚ್.ಡಿ.ಕುಮಾರಸ್ವಾಮಿ ಮಂತ್ರಿಯಾಗಿದ್ದು ಸಂಭ್ರಮಾಚರಣೆಯನ್ನು ಮಾಡಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಭಾರತ ದೇಶದ ವಿಶ್ವಗುರು ಎಂದೇ ಪ್ರಸಿದ್ಧಿಯಾಗಿರುವ ನರೇಂದ್ರ ಮೋದಿಜಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು ಅವರ ಜೊತೆಗೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಂಪುಟ ದರ್ಜೆಯ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು ಇದರಿಂದ ಕರ್ನಾಟಕದಲ್ಲಿ ಜೆ.ಡಿಎ.ಸ್. ಭದ್ರವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ, ಅಲ್ಲದೆ ದೇಶದಲ್ಲಿ ಕಾಂಗ್ರೇಸ್ ಗ್ಯಾರಂಟಿಗಳು ದಿಕ್ಕು ತಪ್ಪಿವೆ, ಮುಂದೆ ದೇಶದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ದೇಶವನ್ನು ಪ್ರಗತಿ ಪಥದಲ್ಲಿ ತೆಗೆದುಕೊಂಡು ಹೋಗಿ ಜಗತ್ತಿನ ಶ್ರೇಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರುವಂತೆ ಮಾಡುವುದರಲ್ಲಿ ಸಂಶಯಬೇಡ,. ಕೇವಲ ಗ್ಯಾರಂಟಿಗಳಿಂದ ದೇಶ ಪ್ರಗತಿಸಾಧಿಸಲಾರದು ಎಂದು ಅದ್ದರಿಂದ ಮತ್ತೋಮ್ಮೆ ದೇಶಕ್ಕೆ ಮೋದಿಯಾದರೆ ಕುಮಾರಣ್ಣನವರು ಮಂತ್ರಿಯಾಗಿ ಸಾಧನೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸುವುದರ ಮುಕಾಂತರ ಹಾಗೂ ಸಿಹಿ ಹಂಚಿ ಆಚರಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ನಾರಾಯಣ ರೆಡ್ಡಿ.ಶಿವ ರಂಗಪ್ಪ.ಒಬರೆಡ್ಡಿ. ಮಾರುತಿ ಶಂಕರ್. ತಾಯಪ್ಪ.ಜಾತ್ಯತೀತ ಜನ್ಪದ ಪಕ್ಷದ ಮುಖಂಡರಾದ ಆದಿಮನೆ ಲಿಂಗಪ್ಪ. ಡಿ ತಿಪ್ಪೇಸ್ವಾಮಿ. ಎನ್ ಬಿ.ರಾಜ. ಮರಿ. ಹೊನ್ನೂರ್ ಸ್ವಾಮಿ. ನಾಗಯ್ಯ ಹೆಚ್ಚು ಉಪ್ಪರಹಳ್ಳಿ ರಾಮು ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.