ಕುಮಸಿ: ನಾಳೆಯಿಂದ ಶರಣಬಸವೇಶ್ವರ ಮಹಾಪುರಾಣ ಪ್ರಾರಂಭೋತ್ಸವ

ಕಲಬುರಗಿ,ಸೆ.9-ತಾಲ್ಲೂಕಿನ ಸುಕ್ಷೇತ್ರ ಕುಮಸಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರಾವಣ ಮಾಸದ ಕಾರ್ಯಕ್ರಮದ ಅಂಗವಾಗಿ ಮಹಾ ದಾಸೋಹಿ ಶರಣಬಸವೇಶ್ವರ ಮಹಾಪುರಾಣ ಕಾರ್ಯಕ್ರಮವು ಸೆ.10 ರಿಂದ 18 ರವರೆಗೆ ಜರುಗಲಿದೆ.
ಗುರುಪಾದಲಿಂಗ ಮಹಾ ಶಿವಯೋಗಿಗಳ ಅಧ್ಯಕ್ಷತೆಯಲ್ಲಿ ವೇ.ಪಂ.ಸಿದ್ಧೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರ ಅವರ ವಾಣಿಯಿಂದ ಶರಣಬಸವೇಶ್ವರರ ಮಪಾಪುರಾಣ ನಡೆಯಲಿದೆ. ಗವಾಯಿಗಳಾದ ಬಸವರಾಜ ಸಾಲಿ ಹಾಗೂ ಶ್ರೀಶೈಲ ಝಳಕಿ, ತಬಲಾವಾದಕರಾದ ಅಣವೀರಯ್ಯ ಸ್ವಾಮಿ ಮಾಡ್ಯಾಳ್ ಅವರು ಅವರಿಗೆ ಸಾಥ್ ನೀಡಲಿದ್ದಾರೆ.
ರಾಜಕೀಯ ಗಣ್ಯರು, ಗ್ರಾಮದ ಹಿರಿಯರು ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಮಸಿ ಮತ್ತು ಸುತ್ತಮುತ್ತಲ್ಲಿನ ಗ್ರಾಮಗಳ ಭಕ್ತಾಧಿಗಳು ಈ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶರಣಬಸವೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಲಾಗಿದೆ.