ದೇವಣಗಾಂವ:ಮಾ.25: ಸಮೀಪದ ಕುಮಸಗಿಯ ಸದ್ಗುರು ವೆಂಕಟೇಶ್ವರ ಮಹಾರಾಜರ ಜಾತ್ರಾ ಮಹೋತ್ಸವವು ಮಾ.30 ರಿಂದ ಜರುಗುವದು.
ಸದ್ಗುರು ಅಭಿನವ ವೆಂಕಟೇಶ್ವರ ಸ್ವಾಮಿಗಳ ನೇತೃತ್ವದಲ್ಲಿ, ವೇ.ಚನ್ನಬಸಯ್ಯ ಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 30 ರಂದು ಸಂಜೆ 6ಕ್ಕೆ ಕಿರು ರಥೋತ್ಸವ,
31 ರಂದು ಬೆಳಿಗ್ಗೆ 11ಕ್ಕೆ ಪುರಾಣಿಕರಾದ ದೇವರಹಿಪ್ಪರಗಿಯ ಜಡಿಸಿದ್ದೇಶ್ವರ ಶಿವಾಚಾರ್ಯರಿಂದ, ಗವಾಯಿ ವಿರುಪಾಕ್ಷಯ್ಯ ಕಲಬುರಗಿಮಠ, ತಬಲಾ ವೀರೇಶ ಹಿರೇಜೇವರ್ಗಿ ಇವರಿಂದ ಸಾಗಿ ಬಂದ ಪುರಾಣ ಮಂಗಲ, ಸಂಜೆ 4ಕ್ಕೆ ಕಳಸದ ಮೆರವಣಿಗೆಯೂ ಪುರವಂತರ ಸೇವೆ, ಮದ್ದು ಸುಡುವದು, ನವಿಲು ಕುಣಿತ, ಕರಡಿ ಕುಣಿತ, ಕುದುರೆ ಕುಣಿತ, ಬ್ಯಾಂಜೋ, ಹಲಿಗೆಮೇಳ, ಡೊಳ್ಳು, ಭಜನೆಗಳ ಮೂಲಕ ಸಂಜೆ 5ಕ್ಕೆ ವೆಂಕಟೇಶ್ವರರ ಭವ್ಯ ರಥೋತ್ಸವವು ಅದ್ದೂರಿಯಾಗಿ ಜರುಗುವದು. ರಾತ್ರಿ 10-30ಕ್ಕೆ ಭೀಮವಿಲಸ ಅರ್ಥಾತ್ ಕೀಚಕನ ವಧೆ ಎಂದ ಬಯಲಾಟ ಪ್ರದರ್ಶನ ವಿದೆ.
ಏ.2 ರಂದು ಸಂಜೆ 4 ಕ್ಕೆ ಜಂಗಿ ಕುಸ್ತಿಗಳು ಜರುಗುವವು, ನಂತರ 10-30 ಕ್ಕೆ ಬಯಲಾಟದ ಮರು ಪ್ರದರ್ಶನ ವಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.