ಕುಬೇರ ನಗರದಲ್ಲಿ 6ರಂದು ಹನುಮಾನ ಜಯಂತ್ಯೋತ್ಸವ

ಕಲಬುರಗಿ:ಎ.4: ನಗರದ ಕೋಟನೂರ ಡಿ ಕುಡಾ ಬಡಾವಣೆ ಹತ್ತಿರದ ಕುಬೇರ ನಗರದ ಕುಬೇರಾಂಜನೇಯ ದೇವಾಲಯದಲ್ಲಿ ಎ. 6ರಂದು ಹನುಮಾನ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಿಗ್ಗೆ 5ಕ್ಕೆ ಪಂಚಾಮೃತ ಅಭಿಷೇಕ, ತದನಂತರ ಅಲಂಕಾರ ಎಲೆ ಪೂಜೆ ಹಾಗೂ ನಂತರ 6 ಕ್ಕೆ ಹನುಮಾನ ಜನನ ತೊಟ್ಟಿಲು ಸೇವೆ ನಡೆಯಲಿದೆ.

ಮುಗಳನಾಗಾಂವ ಸಂಸ್ಥಾನದ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಅವರ ಸಾನ್ನಿಧ್ಯದಲ್ಲಿ ಜಯಂತ್ಯೋತ್ಸವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಕುಬೇರಾಂಜನೇಯ ಸದ್ಭಕ್ತ ಮಂಡಳಿ ತಿಳಿಸಿದೆ.

ಸಂಜೆ 6ಕ್ಕೆ ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಸಂಜೆ ಜರುಗಿ ಬರಲಿದೆ. ತದನಂತರ ಸಂಗೀತ ಕಲಾವಿದರಿಂದ ಭಜನೆ ಜರುಗಿ ಬರಲಿದೆ.