ಕುಬೇರ ನಗರದಲ್ಲಿ ಸಂಭ್ರಮದಿಂದ ನಾಗರಪಂಚಮಿ

ಕಲಬುರಗಿ:ಆ.02: ನಗರದ ಕೊಟನೂರ ಡಿ ಜಿಡಿಎ ಬಡಾವಣೆ ಹತ್ತಿರದ ಕುಬೇರಾಂಜನೇಯ ದೇವಾಲಯ ಆವರಣದಲ್ಲಿನ ನಾಗರಮೂರ್ತಿಗೆ ಬಡಾವಣೆ ಹಾಗೂ ಸುತ್ತಮುತ್ತಲಿನ ಮಹಿಳೆಯರು ಹಾಲೆರೆಯುವ ಮೂಲಕ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಿದರು.

ಹಸಿರು ತೋರಣಗಳಿಂದ ಸಿಂಗರಿಸಿದ ನಾಗರಕಟ್ಟೆ ಹಾಗೂ ನಾಗರಮೂರ್ತಿಗೆ ನಾಗರ ಪಂಚಮಿ ಕುರಿತಾದ ಹಾಡುಗಳನ್ನು ಹಾಡುವುದರೊಂದಿಗೆ ಮಹಿಳೆಯರು, ಚಿಣ್ಣರು ನಾಗರ ಪಂಚಮಿ ಆಚರಿಸಿದರು.

ನಾಗರ ಪಂಚಮಿಗೆ ಸರ್ವ ನಿಟ್ಟಿನ ಎಲ್ಲ ಅಗತ್ಯ ಸಿದ್ಧತೆಗಳನ್ನು ಕುಬೇರಾಂಜನೆಯ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮಾಡಿದ್ದರು.

ನಾಗರ ಪಂಚಮಿ ಹಬ್ಬದ ಸಡಗರದಲ್ಲಿ ಕುಬೇರ ನಗರ, ನ್ಯೂ ಓಝಾ ಲೇ ಔಟ್, ಸಜ್ಜನ ಲೇ ಔಟ, ಜಿಡಿಎ ಬಡಾವಣೆ ಮಹಿಳೆಯರು, ನಾಗರಿಕರು ಹಾಜರಿದ್ದರು.