ಕುಪ್ಪೆಯಲ್ಲಿ ರಾಮನವಮಿ ಆಚರಣೆ.   

ಸೊರಬ. ಮಾ.31; ತಾಲೂಕಿನ ಪುರಾಣ ಪ್ರಸಿದ್ಧ ಇತಿಹಾಸಿಕ ಧಾರ್ಮಿಕ ನೆಲೆ ಬೀಡಾಗಿರುವ ಕುಪ್ಪೆ ಗ್ರಾಮದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ರಾಮ ಲಕ್ಷ್ಮಣ ಸೀತಾರಾಮ ಆಂಜನೇಯ ದೇವರುಗಳ ಅಲಂಕಾರ ಸೇವೆ ಹಾಗೂ ಪೂಜಾ ಕೈoಕರ್ಯಗಳು ಸಾಂಗವಾಗಿ ನೆರವೇರಿತು.ಸತತವಾಗಿ 18 ವರ್ಷಗಳಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸುತ್ತಾ ಬಂದಿದ್ದು. ಕಳೆದ ಏಳು ವರ್ಷಗಳಿಂದ  ಸೀತಾರಾಮಾಂಜನೇಯ ದೇವರುಗಳಿಗೆ ಅಲಂಕಾರ ಸೇವೆಯನ್ನು ಮಾಡುತ್ತಾ ಬರಲಾಗುತ್ತಿದೆ ಎಂದು ಅರ್ಚಕ ಕೆ. ಸಿ ಛತ್ರಪತಿ ತಿಳಿಸಿದರು.                         ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ ಸಿ ರವೀಂದ್ರನಾಥ, ಗ್ರಾಮದ ಅಧ್ಯಕ್ಷ ಮಂಜಪ್ಪ ಕೆ.ಎನ್, ಕಾರ್ಯದರ್ಶಿ ಮಂಜುನಾಥಗೌಡ ಕೆ ಆರ್, ಕೆ ರಿಯಪ್ಪ, ನಾಗಪ್ಪ, ಜಯಶೀಲ ಗೌಡ, ರಂಗಪ್ಪ, ಲಿಂಗಪ್ಪ, ಬಸವರಾಜ ಗೌಡ, ಹುಚ್ಚರಾಯಪ್ಪ, ಟೋಕಪ್ಪ, ಸುರೇಶ ಗೌಡ, ಜಗದೀಶ, ಬಂಗಾರಪ್ಪ, ಶಿವಕುಮಾರ, ರಾಜಶೇಖರ ಗೌಡ, ಮೋಹನ, ಶಿವರಾಮ, ಸುರೇಶ್ ಸೇರಿದಂತೆ ಮೊದಲಾದವರಿದ್ದರು.