ಕುಪ್ಪಿನಕೆರೆ : ಹಾವು ಕಚ್ಚಿ – ಎತ್ತು ಸಾವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.8 :- ಕಣದಲ್ಲಿ ಕಟ್ಟಿಹಾಕಿದ್ದ ಎತ್ತಿಗೆ ವಿಷಪೂರಿತ ಹಾವೊಂದು ಕಚ್ಚಿದರ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಪ್ಪಿನಕೆರೆ ಗ್ರಾಮದಲ್ಲಿ ಶುಕ್ರವಾರ ಸಂಜೆ 4ಗಂಟೆಗೆ ಜರುಗಿದೆ.
ಕುಪ್ಪಿನಕೆರೆ ಛಲವಾದಿ ಪ್ರಕಾಶ ಎನ್ನುವವರ ಎತ್ತಾಗಿದ್ದು ಸುಮಾರು ಐವತ್ತು ಸಾವಿರ ರೂ ಬೆಲೆಬಾಳುತ್ತದೆ  ಎಂದು ಅಂದಾಜಿಸಲಾಗಿದೆ.
ಶುಕ್ರವಾರ  ಸಂಜೆ ಕುಪ್ಪಿನಕೆರೆ ಗ್ರಾಮದ ಪ್ರಕಾಶ ಅವರ ಕಣದಲ್ಲಿ ಕಟ್ಟಿಹಾಕಲಾಗಿದ್ದು ಮೇವು ತಿನ್ನುತ್ತಿದ್ದ ಎತ್ತಿಗೆ ಎಲ್ಲಿಂದಲೋ ಬಂದ ವಿಷಪೂರಿತ ಹಾವೊಂದು ಕಚ್ಚಿ ಹೋದ ಪರಿಣಾಮ ಸ್ಥಳದಲ್ಲೇ ಎತ್ತು ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ ವೆಂಕಟೇಶನಾಯ್ಕ್  ಭೇಟಿ ನೀಡಿ ಹಾವು ಕಚ್ಚಿರುವ ಸತ್ತಿರುವ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸದ ವರದಿ ನೀಡಿದರನ್ವಯ ಸ್ಥಳ ಪರಿಶೀಲನೆ ನಡೆಸಿದ ಗ್ರಾಮಲೆಕ್ಕಾಧಿಕಾರಿ ಪ್ರಭು ಹಾಗೂ ಕಂದಾಯ ನೀರಿಕ್ಷಕ ಕುಮಾರಸ್ವಾಮಿ ಅವರು  ವರದಿಯನ್ನು ಕೂಡ್ಲಿಗಿ ತಹಸೀಲ್ದಾರ್ ರಾಜು ಪಿರಂಗಿ ಅವರಿಗೆ ಒಪ್ಪಿಸಿದ್ದಾರೆಂದು ತಿಳಿದಿದೆ.