
ಕೂಡ್ಲಿಗಿ.ಮೇ.3 :- ವಿಧಾನಸಭಾ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ 100ರಷ್ಟು ಮತದಾನ ನಡೆಸಲು ಸ್ವೀಪ್ ಅಧಿಕಾರಿಗಳು ಒಂದಿಲ್ಲೊಂದು ಬಗೆಯ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು ಕುಪ್ಪಿನಕೆರೆ ಗ್ರಾಮದಲ್ಲಿ ಬಿಎಲ್ ಓ ರಫೀಕ್ ರವರು ಮನೆಮನೆಗೆ ತೆರಳಿ ಕಡ್ಡಾಯವಾಗಿ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ತಿಳಿಹೇಳುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.