ಸಂಜೆವಾಣಿ ವಾರ್ತೆ ಕುಕನೂರು, ಜು.26: ತಾಲೂಕಿನ ಪ್ರಸಿದ್ಧ ಮೊಹರಂ ಹಬ್ಬ ಕುದುರಿಮೋತಿ ಗ್ರಾಮದಲ್ಲಿ ಈಗಾಗಲೇ ಮೊಹರಂ ಪಾಂಜಾ ಗಳನ್ನು ಕೂಡಿಸಿರುವರೊಂದಿಗೆ ಹಬ್ಬದ ಸಡಗರ ಕಂಡು ಬರುತ್ತಿದೆ ವಿಶೇಷವಾಗಿ ಎರಡು ದಿವಸ ದಿನಾಂಕ 28 ಮತ್ತು 29 ದೇವರ ಉತ್ಸವ ಹಾಗೂ ಮೊಹರಂ ಕೊನೆಯ ದಿನದ ಆಚರಣೆ ಜರಗುವ ಸಂದರ್ಭದಲ್ಲಿ ಸಹಸ್ತ್ರಾರು ಜನರು ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಬೇವೂರ ಪೋಲೀಸ ಠಾಣಾಧಿಕಾರಿ ಶ್ರೀ ಪ್ರಶಾಂತ ಅವರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶಾಂತಿ ಸಭೆ ನಡೆಸಿದಾಗ ಶ್ರೀ ಮಂಜುನಾಥಪ್ಪ ಗಟ್ಟೆಪ್ಪನವರ ಪ್ರಾಸ್ತಾವಿಕ ಮಾತುಗಳನ್ನಾಡಿದರು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಶ್ರೀಮತಿ ಫರೀದಾಬೇಗಂ ತಂಬಾಕಾದರ್ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ವಿಜಯ ದಾಸರ ದಳಪತಿ ಹನುಮಗೌಡ್ರ ಪೊಲೀಸಪಾಟೀಲ ಗ್ರಾಮ ಪಂಚಾಯತಿ ಪಿಡಿಒ ಮಹಾದೇವಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಶರಣಯ್ಯ ಜಂಗಮರ ಮಂಜುನಾಥ ಸಜ್ಜನ ಮಾಬುಸಾಬ ಮಕಾಂದರ ರವಿ ಕಟ್ಟಿಗಿ ಗ್ರಾಮದ ಹಿರಿಯರಾದ ಸುಭಾಷ ಈಳಗೇರ ದುರ್ಗಪ್ಪ ಕಾಳಿ ಪಂಪಣ್ಣ ಹಂಪಣ್ಣನವರ ಅಶೋಕ ಸಜ್ಜನ ಮಹಾಂತಪ್ಪ ಶಿಡ್ನಳ್ಳಿ ಡಾ|| ಹುಸೇನ ಬಾಷಾ ಮಕಾಂದರ ಧರ್ಮಣ್ಣ ಕಾಳಿ ವಿಜಯ ದಾಸರ ಬಾಳಪ್ಪ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು. One attachment • Scan |