ಕುದರಿಸಾಲವಾಡಗಿ ಬಾಲಕಿಯರ ಪ್ರಕರಣ: ಪುನರ ಮರಣೋತ್ತರ ಪರೀಕ್ಷೆಗೆ ಪಾಲಕರ ಮನವಿ

ವಿಜಯಪುರ, ಜೂ.4-ಬಸವನಬಾಗೇವಾಡಿ ತಾಲ್ಲೂಕಾ ಕುದರಿಸಾಲವಾಡಗಿ ಗ್ರಾಮದ ಅಪ್ರಾಪ್ತ ಬಾಲಕಿಯರಾದ ಕುಮಾರಿ ದಿ. ರೇಣುಕಾ ಹಾಗೂ ಪ್ರೀತಿ ಇವರಿರ್ವರ ಕೊಲೆಯಾಗಿದ್ದನ್ನು ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆಯೆಂದು ಬಿಂಬಿಸುತ್ತಿದ್ದು ಮನಃ ಮರಣೋತ್ತರ ಪರೀಕ್ಷೆಯನ್ನು ತಮ್ಮ ನೇತೃತ್ವದಲ್ಲಿ ನಡೆಸಬೇಕೆಂದು ಕುಮಾರಿ ದಿ. ರೇಣುಕಾ ಹಾಗೂ ಪ್ರೀತಿಯ ಪಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಸವನಬಾಗೇವಾಡಿ ತಾಲ್ಲೂಕಾ ದೇವರಹಿಪ್ಪರಗಿ ಮತಕ್ಷೇತ್ರದ ಕುದರಿಸಾಲವಾಡಗಿ ಗ್ರಾಮದ ಪರಿಶಿಷ್ಟ ಜಾತಿಯ ಅಸ್ಪಶ್ಯ ಸಮುದಾಯದ ಮಾದಿಗ ಜನಾಂಗದವರಾಗಿರುವ ನಮ್ಮ ಮಕ್ಕಳಾದ ಕುಮಾರಿ ರೇಣುಕಾ ಯಲಗುರದಪ್ಪ ಕಳ್ಳಿಮನಿ ಹಾಗೂ ಪ್ರೀತಿ ಶಿವರಾಜ ಕಳ್ಳಿಮನಿ ಇವರ ಮೇಲೆ ಸ್ಥಳಿಯ ಗುಂಡಾ ಗ್ಯಾಂಗನವರು ಲೈಂಗಿಕ ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆಗೈದು ಯಾಳವಾರ ಗ್ರಾಮದ ಸರಹದ್ದಿನಲ್ಲಿ ಬರುವ ಸೋಮನಗೌಡರ ಬಾವಿಯಲ್ಲಿ ರೇಣುಕಾ ಹಾಗೂ ಪ್ರೀತಿಯ ಮೃತ ದೇಹಗಳನ್ನು ಬಾವಿಯಲ್ಲಿ ಬಿಸಾಕಿ, ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಂಬಿಸಿದ್ದರ ಮೇಲೆ ಈಗಾಗಲೇ ಬಾಗೇವಾಡಿ ಪೆÇಲೀಸ್ ಠಾಣೆಯಲ್ಲಿ ದಿ. 14-05-2021 ರಂದು ಪ್ರಕರಣ ದಾಖಲಾಗಿದೆ.
ಈ ದುಷ್ಕøತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸರಿಯಾಗಿ ವಿಚಾರಣೆ ಮಾಡಿ ಪುರಾವೆಗಳನ್ನು ಸಂಗ್ರಹಿಸಿದೆ ನಾಮಕಾವಾಸ್ತೆ ಮಹಿಬೂಬಸಾಬ ಗುಳಬಾಳ ಹಾಗೂ ಇನ್ನಿಬ್ಬರ ಆರೋಪಿಗಳನ್ನು ಬಂದಿಸಿ ಜೈಲಿಗಟ್ಟಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಗ್ರಾಮದ ಕೆಲವೊಂದು ರಾಜಕೀಯ ಪಟ್ಟಬದ್ಧ ಹಿತಾಸಕ್ತಿಗಳು ಆರೋಪಿ ಸಮುದಾಯಗಳ ರಕ್ಷಣೆಗಾಗಿ ನಿಂತಿದ್ದು ಪೆÇಲೀಸ್ ಇಲಾಖೆ ಕೈಗೊಂಡಿರುವ ತನಿಖೆಯ ದಿಕ್ಕು ತಪ್ಪಿಸಿದ್ದರಿಂದ ಇಡೀ ಘಟನೆಯನ್ನು ಮುಚ್ಚಿ ಹಾಕುವ ವ್ಯವಸ್ತಿತ ಹೊನ್ನಾರ ನಡೆದಿದೆ.
ಹಾಗಾಗಿ ನಮ್ಮ ಮಕ್ಕಳು ತಾವಾಗಿಯೇ ಸಾಯುವಂತಹ ತೊಂದರೆಗಳಿರಲಿಲ್ಲ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಿದ್ದರು ಅವರೆಂದು ಜೀವ ಕಳೆದುಕೊಳ್ಳುವಂತಹ ದುಸ್ಸಾಹಸಕ್ಕೆ ಮುಂದಾದವರಲ್ಲ. ಹೀಗಾಗಿ ಅಪ್ರಾಪ್ತ ಬಾಲಕೀಯರಾದ ನಮ್ಮ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಮಾಡಿ ಕೊಲೆಗೈದು ಸಾಕ್ಷಿ ಪುರಾವೆಗಳನ್ನು ನಾಶ ಪಡಿಸಿದ ಈ ಘಟನೆಯ ಹಿಂದಿರುವ ಕಿರಾತಕರನ್ನು ಕಂಡುಹಿಡಿಯುವಲ್ಲಿ ಪೆÇಲೀಸ್ ಇಲಾಖೆ ನಿರ್ಲಕ್ಷ ತೋರಿದಂತಾಗಿದೆ. ಹಾಗಾಗಿ ಈ ಘಟನೆಯ ಹಿನ್ನೆಲೆಯ ಹೂನ್ನಾರವನ್ನು ಬಯಲಿಗೆಳೆಯಲು ಈಗ ಕುದರಿಸಾಲವಾಡಗಿ ಗ್ರಾಮದ ಸ್ಮಶಾನದಲ್ಲಿ ಹುಗಿದಿರುವ (ಮಣ್ಣು ಮಾಡಿರುವ) ಪ್ರೀತಿ ಮತ್ತು ರೇಣುಕಾಳ ಹೆಣಗಳನ್ನು ಮರು ತಪಾಸಣೆ ಮರು ಮರಣೋತ್ತರ ಪರೀಕ್ಷೆಯನ್ನು ಮಾನ್ಯರಾದ ತಮ್ಮ ನೇತೃತ್ವದಲ್ಲಿ ನಡೆಸಬೇಕು ಈ ಹಿಂದೆ ಮರಣೋತ್ತರ ಪರೀಕ್ಷೆಯ ವಿಧಿ ವಿಧಾನಗಳನ್ನು ಗಾಳಿಗೆ ತೂರಿ ತಮ್ಮ ಅನಕೂಲಕ್ಕೆ ತಕ್ಕಂತೆ ವರದಿಯನ್ನು ಸೃಷ್ಟಿಸಿದಿರುವುದರ ಹಿಂದೆ ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿಗಳು ಹಾಗೂ ಬಾಗೇವಾಡಿ ಡಿವಾಯ್‍ಎಸ್‍ಪಿ ಇವರುಗಳ ದಿವ್ಯ ನಿರ್ಲಕ್ಷ ಹಾಗೂ ಅಸಹಾಯಕತೆ ಎದ್ದು ಕಾಣುತ್ತಿದೆ.
ಅವರ ಕರ್ತವ್ಯ ಬೃಷ್ಣತೆಯಿಂದ ನಮ್ಮ ಮಕ್ಕಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಾಟಾಚಾರಕ್ಕೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯ ನೆಪದಲ್ಲಿ ಸಾಕ್ಷಿ ಪುರಾವೆಗಳನ್ನು ಕ್ರೂಡಿಕರಿಸುವಲ್ಲಿ ವಿಫಲರಾಗಿರುವ ಪೆÇಲೀಸ್ ಇಲಾಖೆ ಕರ್ತವ್ಯ ಚ್ಯುತಿ ಎಸೆಗಿದ್ದು ಇಡೀ ಘಟನೆಯನ್ನು ಪ್ರತ್ಯೇಕವಾಗಿ ಸಿಓಡಿ ತನಿಖೆಗೆ ಒಳಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ, ಶಿವಕುಮಾರ ಕೋಟಿಮಠ, ರಾಮಸೇನಿಯಿಂದ ನೀಲಕಂಠ ಕಂದಗಲ, ಬಸವರಾಜ ಕಲ್ಯಾಣಪ್ಪಗೋಳ, ಆನಂದ ಕುಲಕರ್ಣಿ, ಗೌರವ್ವ ಕಳ್ಳಿಮನಿ, ಮಾದಿಗ ಸಮಾಜದ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಬೆಣ್ಣೂರ, ಜಯಶ್ರೀ ಕಳ್ಳಿಮನಿ, ಸೋಮಶೇಖರ ಕಳ್ಳಿಮನಿ, ಮಡಿವಾಳಪ್ಪ ಕಳ್ಳಿಮನಿ, ಶಂಕ್ರಪ್ಪ ಕಳ್ಳಿಮನಿ, ಗುರುರಾಜ ಗುಡಿಮನಿ ಉಪಸ್ಥಿತರಿದ್ದರು.