ಕುದರಿಮೋತಿಗೆ ಪಿ ಯುಸಿ ಕಾಲೇಜು ಮಂಜೂರು


ಸಂಜೆವಾಣಿ ವಾರ್ತೆ
ಕುಕ ನೂರು, ಸೆ.23: ತಾಲೂಕಿನ. ಕುದರಿಮೋತಿ ಗ್ರಾಮಕ್ಕೆ ಸರಕಾರ ದಿಂದ ಪಿಯುಸಿಕಾಲೇಜು ಮಂಜೂರಾಗಿರುವುದಕ್ಕೆ ಗ್ರಾಮದ ಶಿಕ್ಷಣ ಪ್ರೇಮಿ ಗಳು ಸಂಭ್ರಮಿಸಿದರು.ಪ್ರಮುಖರಾದ ಮಂಜುನಾಥ   ಗಟ್ಟೆಪ್ಪನವರ ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರು,ಯಲಬುರ್ಗಾ ಹಿರಿಯ ಮುಖಂಡರಾದ ಶ್ರೀ ಅಶೋಕ್ ಸಜ್ಜನ, ಕರಿಯಪ್ಪ ಉಪ್ಪಾರ, ರಾಮ್ ರಾವ್, ನಾಗಪ್ಪ, ಯಮನಪ್ಪ, ಈರಣ್ಣ, ಫಕೀರಪ್ಪ,ಬಾಳಪ್ಪ, ಮಂಜುನಾಥ್, ಕೆ ಮಂಜುನಾಥ ಪಂಪಾಪತಿ, ಅಶೋಕ ಗಟ್ಟೆಪ್ಪನವರ,ಶರಣಗೌಡ, ಮಲ್ಲಪ್ಪ ಇನ್ನು ಮುಂತಾದವರು ಭಾಗವಹಿಸಿ ಸಿಹಿ ವಿತರಿಸಿದರು.