ಕುತ್ತು ಹಿಸುಕಿ ಕೊಲೆ ಮಹಿಳೆ ಕೊಲೆ ಸ್ನೇಹಿತನ ಸೆರೆ

ಬೆಂಗಳೂರು,ನ.6- ಸ್ನೇಹಿತನೇ ಮಹಿಳೆಯನ್ನು ಕುತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಜಯನಗರದ ಪಟ್ಟೆಗಾರಪಾಳ್ಯದಲ್ಲಿ ನಡೆದಿದೆ.
ಪಟ್ಟೆಗಾರಪಾಳ್ಯದ ಗಾಯತ್ರಿ (26) ಕೊಲೆಯಾದ ಮಹಿಳೆಯಾಗಿದ್ದಾರೆ.
ಪತಿಯಿಂದ ವಿಚ್ಛೇಧನ ಪಡೆದುಕೊಂಡಿದ್ದ ಮೃತ ಗಾಯತ್ರಿ ನಗರದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈ ಹಿಂದೆ ಗಾಯತ್ರಿಗೆ ಮಂಜುನಾಥ್ ಎಂಬಾತನ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಮೃತ ಗಾಯತ್ರಿ ಹಾಗೂ ಮಂಜುನಾಥ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು .


ಮನೆಯಲ್ಲಿ‌ಇಂದು ಮಧ್ಯಾಹ್ನ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದ್ದು, ಮಂಜುನಾಥ್ ವೇಲ್​ನಿಂದ ಕುತ್ತಿಗೆ ಹಿಸುಕಿ ಗಾಯತ್ರಿಯನ್ನು ಕೊಲೆ ಮಾಡಿದ್ದಾನೆ.
ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ‌ ಆರೋಪಿ ಮಂಜುನಾಥ್​ನನ್ನು ಬಂಧಿಸಿದ್ದಾರೆ.