ಕುತೂಹಲ ಹುಟ್ಟಿಸಿದ ಯಥಾಭವ ಪೋಸ್ಟರ್

ಉತ್ತಮ ಕಂಟೆಂಟ್ ಹೊಂದಿರುವ ಮತ್ತೊಂದು ಚಿತ್ರ “ಯಥಾಭವ”. ಗೌತಮ್ ಬಸವರಾಜು ನಿರ್ದೇಶಿಸಿರುವ ಚಿತ್ರವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

” ಯಥಾಭವ” ಚಿತ್ರದ ಪೆÇೀಸ್ಟರ್ ವಿಭಿನ್ನವಾಗಿದ್ದು ಕುತೂಹಲ ಮೂಡಿಸಿದೆ. ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ.ಎನ್ ನಿರ್ಮಾಣ ಮಾಡಿದ್ದಾರೆ.

ನಿರ್ದೇಶಕ ಗೌತಮ್ ಬಸವರಾಜು ಮಾಹಿತಿ ನೀಡಿ, “ಯಥಾಭವ” ಕೋರ್ಟ್ ರೂಮ್ ಡ್ರಾಮ ಕಥಾಹಂದರ ಹೊಂದಿದೆ. ಪವನ್ ಶಂಕರ್ ಚಿತ್ರದ ನಾಯಕ. ಸಹನ ಸುಧಾಕರ್ ನಾಯಕಿ. ರಾಕ್‍ಲೈನ್ ಸುಧಾಕರ್ ಪುತ್ರ ಗೌತಮ್ ಸುಧಾಕರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಗೌತಮ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹಿರಿಯ ನಟ ದತ್ತಣ್ಣ ನ್ಯಾಯಾಧೀಶರ ಪಾತ್ರ ನಿರ್ವಹಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಬಾಲ ರಾಜವಾಡಿ, ಮಾಸ್ಟರ್ ಸುಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಉತ್ಸವ್ ಶ್ರೇಯ್ ಸಂಗೀತ ನಿರ್ದೇಶನವಿದೆ.