ಕುತೂಹಲ ಕೆರಳಿಸಿದ ಗ್ರಾ.ಪಂ. ಫಲಿತಾಂಶ

ಲಕ್ಷ್ಮೇಶ್ವರ.ಡಿ30 ತಾಲೂಕಿನ 13 ಗ್ರಾಮ ಪಂಚಾಯತ್ ಗಳಿಗೆ ಡಿ 22ರಂದು ನಡೆದ ಚುನಾವಣಾ ಗಳ ಮತ ಎಣಿಕೆ ಕಾಯ9ಬುಧವಾರ ಬೆಳಿಗ್ಗೆ ಆರಂಭಗೊಂಡಿದ್ದು. ಲಕ್ಷ್ಮೇಶ್ವರ ತಾಲೂಕು ರಚನೆಗೊಂಡ ನಂತರ ಮೊದಲ ಬಾರಿ ನಡೆಯುತ್ತಿರುವ ಗ್ರಾಪಂನ ಚುನಾವಣೆ ಯ ಮತ ಎಣಿಕೆ ಕಾಯ9 ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾವ9ಜನಿಕರು ಆಗಮಿಸಿದ್ದರು.
13 ಗ್ರಾಮ ಪಂಚಾಯಿತಿ ಗಳ ಏಕಕಾಲಕ್ಕೆ ಕೈಗೆತ್ತಿಕೊಂಡಿದ್ದು ದೊಡ್ಡೂರ ಗ್ರಾ.ಪಂನ ಮಲ್ಲಪ್ಪ ತೋಟದವರ ಮೊದಲ ಫಲಿತಾಂಶ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಕಾಯ9ಕತ9ರು ಹಷೋ9ದ್ಘಾರ ಮಾಡಿದರು. ಅದೇ ಪಂಚಾಯಿತಿ ಯ ಬಿಜೆಪಿಯ ಸಾಕವ್ವ ಲಮಾಣಿ ಆಯ್ಕೆಯಾಗಿದ್ದು ವಿಶೇಷ ವಾಗಿತ್ತು. ಆದರಳ್ಳಿ ಗ್ರಾಪಂನ ರಮೇಶ ಹೆಗ್ಗಣ್ಣವರ. ನಾಗನಗೌಡ ಪಾಟೀಲ. ಸುಮ್ಮಕ್ಕ ಹರಿಜನ . ಅಡರಕಟ್ಟಿ ಗ್ರಾಪಂಗೆ ಕಾಶವ್ವ ದೊಡ್ಡಮನಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಗ್ರಾಪಂನ ಮತ ಎಣಿಕೆ ಕಾಯ9 ಜೋರಾಗಿ ಸಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಹಾಗೂ ಉಪ ತಹಸಿಲ್ದಾರ ಮಂಜುನಾಥ ದಾಸಪ್ಪನವರ ತಿಳಿಸಿದ್ದಾರೆ.