ಕುಡ ದ ಮೂರು ಯೋಜನೆಗೆ ಅನುಮೋದನೆ: ಅಭಿವೃದ್ಧಿಗೆ ಚಾಲನೆ: ಡಾ. ಚುಲಬುಲ್

ಕಲಬುರಗಿ:ಮೇ.29: ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಾಗರಗಾ ಗ್ರಾಮದಲ್ಲಿ 63.76 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ವಸತಿ ಯೋಜನೆ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತ್ಮಾಕ ಅನುಮೋದನೆ ನೀಡಲಾಗಿದೆ.

26 ಕೋಟಿ ರೂ. ಹೈಟೆಕ್ ತರಕಾರಿ ಮಾರ್ಕೆಟ್ ಎಂ.ಎಸ್.ಕೆ ಮಿಲ್ ಅಫಜಲಪುರ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅನೇಕ ವರ್ಷಗಳಿಂದ ರಸ್ತೆಯ ಮೇಲೆ ತರಕಾರಿ ಮಾರುತ್ತಿದ್ದು, ಇದರಿಂದ ವಾಹನಗಳಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಇದ್ದಕ್ಕೂ ಸಹ ಆಡಳಿತ್ಮಾಕ ಅನುಮೋದನೆ ಸಚಿವ ಸಂಪುಟ ನೀಡಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮೊಹ್ಮದ್ ಅಜಗರ್ ಚುಲಬುಲ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನನ್ನ ಅವಧಿಯಲ್ಲಿ ಈ ಮೂರು ಯೋಜನೆಗಳಿಗಾಗಿ ಪ್ರಮಾಣಿಕ ಪ್ರಯತ್ನ ಮಾಡಿದೆ. ಕಪನೂರ ನೂತನ ಬಡಾವಣೆಯ 90 ಎಕರೆ ಈಗಾಗಲೇ ಮಂಜೂರಾಗಿದೆ. ಹಾಗರಗಾ 50: 50 ಅನುಪಾತ ಹಾಗೂ ನೂತನ ಹೈಟೆಕ್ ತರಕಾರಿ ಮಾರ್ಕೆಟ್ ಬಹುದಿನಗಳ ಬೇಡಿಕೆ ಇತ್ತು. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದಕ್ಕೆ ತುಂಬ ಖುಷಿ ತಂದಿದೆ ಎಂದು ತಿಳಿಸಿದರು.

ನನ್ನ ಕಾರ್ಯಾ ಅವಧಿಯಲ್ಲಿನ ಎಲ್ಲಾ ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ತೃಪ್ತಿ ತಂದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಡಾ. ಅಜಗರ್ ಚುಲಬುಲ್ ಅಭಿನಂದನೆ ಸಲ್ಲಿಸಿದ್ದಾರೆ.

ಮೊದಲು ಸರಕಾರದಿಂದ 40:60 ಅನುಪಾತ ಯೋಜನೆ ಇತ್ತು ಆದರೆ ಹಾಗರಗಾ ರೈತರ ಬೇಡಿಕೆಯಿಂದಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವರಾಗಿದ್ದ ಖಮರ್ ಉಲ್ ಇಸ್ಲಾಂ ಅವರ ಮೇಲೆ ಒತ್ತಡ ಹಾಕಿ ಕಾಯ್ದೆ ತಿದ್ದುಪಡಿ ಮಾಡಿ 50:50 ಅನುಪಾತ ಮಂಜೂರು ಮಾಡಿರುವುದಾಗಿ ತಿಳಿಸಿದರು.

ಹಾಗರಗಾದಲ್ಲಿ 287 ಎಕರೆ ಜಮೀನು ರೈತರು ನೀಡಲು ಒಪ್ಪಿಗೆ ನೀಡಿದರು. ಮೊದಲ ಹಂತದಲ್ಲಿ 117 ಎಕರೆ ಜಮೀನು ರೈತರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿದರು.

ಕಪನೂರಗ ಮತ್ತು ಹಾಗರಗಾ ಯೋಜನೆಗೆ ಸುಮಾರು 35 ಸಾವಿರ ಅರ್ಜಿ ಸ್ವೀಕಾರವಾಗಿತ್ತು. ಈ ಮೂರು ಯೋಜನೆಯಿಂದ ನಗರದ ನಿವಾಸಿಗಳಿಗೆ ಲಾಭ ಹಾಗೂ ಸುಂದರ ರಸ್ತೆ ನಗರದ ಅಭಿವೃದ್ಧಿಗೆ ಚಾಲನೆ ಸಿಕ್ಕಿದೆ ಎಂದು ಬಣ್ಣಿಸಿದರು.