ಕುಡುತಿನಿ: 100 ದಿನ ದಾಟಿದ ರೈತರ ಹೋರಾಟ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.28: ತಾಲೂಕಿನ ಕುಡತಿನಿ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಹೋರಾಟ 100 ದಿನ ದಾಟಿದೆ.
ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್.ಎಂ.ಡಿ.ಸಿ  ಪಂಕನಿಗಳಿಗೆ ವಶಪಡಿಸಿಕೊಂಡ 12500 ಎಕರೆ ಭೂಮಿಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದೇ, ಉದ್ಯೋಗ ನೀಡದೇ, 13 ವರ್ಷ ಕಳೆದಿದೆ, ಕೂಡಲೇ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ನಮ್ಮ ಜಮೀನುಗಳನ್ನು ನಮಗೆ ವಾಪಸ್ಸು ನೀಡಿ ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ನಿನ್ನೆಗೆ 100 ದಿನ ತಲುಪಿದೆ, ಇದರ  ಭಾಗವಾಗಿ  ಕುಡತಿನಿ, ಹರಗಿನಡೋಣಿ, ಕೊಳಗಲ್ಲು, ವೇಣಿವೀರಾಪುರ, ಜಾನೆಕುಂಟೆ, ಎರ್ರಂಗಳಿ ರೈತರು ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಘೋಷ ವಾಕ್ಯದಿಂದ ನಿನ್ನೆ ರಾತ್ರಿ ಕುಡುತಿನಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಹಾಗೂ ಸರ್ಕಾರ ಮತ್ತು ಕಂಪನಿಗಳ ವಿರುದ್ಧ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶವಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿದರು, ವಿವಿಧ ಕಲಾತಂಡಗಳು ಹಾಗೂ ರೈತರು ಸೇರಿ ಕುಡತಿನಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರು ರೈತರ ಈ ನ್ಯಾಯಯುತ ಬೇಡಿಕೆ ಶೀಘ್ರವಾಗಿ ಈಡೇರಿಸಬೇಕೆಂದು ಆಗ್ರಹಿಸಿದರು.