ಕುಡುತಿನಿ: ಕೈಗಾರಿಕೆಗಳ ವಿರುದ್ದದ ಹೋರಾಟ 3ನೇ ದಿನಕ್ಕೆ ಲಾರಿ ತಡೆದು ಪ್ರತಿಭಟನೆ

ಕುರುಗೋಡು: ಜ.4 ಸಮೀಪದ ಕುಡುತಿನಿ ಕೈಗಾರಿಕಾ ಪ್ರದೇಶದಲ್ಲಿ ಕುಡುತಿನಿ ನಾಗರಿಕರು, ವಿವಿಧ ಕನ್ನಡಪರ ಸಂಘಟನೆಗಳು, ಪಂಚಾಯ್ತಿ ಸದಸ್ಯರು, ಮಹಿಳೆಯರು, ಅಂಗವಿಕಲರು ಮತ್ತು ಪಟ್ಟಣದ ಮುಖಂಡರ ಸಂಯುಕ್ತಾಶ್ರಯದಲ್ಲಿ ದೂಳು ನಿಯಂತ್ರಿಸಲು ನಡೆಸುವ ಹೋರಾಟವು 3ನೇ ದಿನಕ್ಕೆ ಕಾಲಿರಿಸಿದ್ದು ಇಂದು ಲಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಇದರಿಂದ ವಿವಿಧ ಕಾರ್ಖಾನೆಗಳಿಗೆ ಹೋಗುವ ಲಾರಿಗಳ ಸಂಚಾರ ಅಸ್ತವ್ಯಸ್ತಗೊಂಡು ಕಾರ್ಖಾನೆಗಳಿಗೆ ತೊಂದರೆಯುಂಟಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ರಾಜಶೇಖರ್ ಮಾತನಾಡಿ, ‘ಕುಡುತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳಾದ ವೇಣಿ ವೀರಾಪುರ, ಹರಗೀನಡೋಣಿ, ಸಿದ್ದಮ್ಮನಹಳ್ಳಿ, ಸುಲ್ತಾನಾಪುರ, ತಿಮ್ಮಲಾಪುರ ಗ್ರಾಮಗಳಲ್ಲಿನ ಸಾರ್ವಜನಿಕರು ಅಸ್ತಮ, ಕ್ಯಾನ್ಸಾರ್, ಇತರ ಹೃದಯ ಸಂಬಂಧಿತ ಕಾಯಿಲೆಗಳಿಗೆ ಒಳಗಾಗಿದ್ದಾರೆ ಹಾಗೂ ಕೈಗಾರಿಕೆಗಳ ಧೂಳು ನಿಯಂತ್ರಣಕ್ಕಾಗಿ ಕಳೆದ ತಿಂಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರೂ ಯಾವ ಪ್ರಯೋಜವಾಗಿಲ್ಲ. ಜೊತೆಗೆ ಜಿಲ್ಲಾಧಿಕಾರಿಗಳು, ಪರಿಸರ ಮಾಲಿನ್ಯ ಅಧಿಕಾರಿಗಳು ಹಾಗು ಕೈಗಾರಿಗಳ ಮಾಲಿಕರ ಧೂಳು ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಹಾಗೂ ಜಿಲ್ಲಾಡಳಿತವೇ ಜನರೇ ಜೀವದ ಜೋತೆಗೆ ಚೆಲ್ಲಾಟವಾಡುತ್ತಿದೆ’ಎಂದು ಅಸವiಧಾನ ವ್ಯಕ್ತಪಡಿಸಿದರು.
ಕರವೇ ಮುಖಂಡ ಜಂಗ್ಲಿಸಾಬ್, ಕಮ್ಮಸಂಘದ ಅಧ್ಯಕ್ಷ ವಿ.ರಾಮು, ಸಿ.ಡಿ.ದುಗ್ಗೇಪ್ಪ, ಎ.ರಾಜಾ, ಎಂ.ಪಿ.ತಿಮ್ಮಪ್ಪ, ಎಂ.ಗಂಗಾಧರ, ಸಂಪತ್‍ಕುಮಾರ್ ಇತರರು ಮಾತನಾಡಿ ಕೈಗಾರಿಕಾರಿಕಾ ಮಾಲಿಕರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣಪಂಚಾಯಿತಿ ಸದಸ್ಯ ಜಿ.ಎಸ್.ವೆಂಕಟರಮಣಬಾಬು, ಬಿ.ಕೆ.ಲೆನಿನ್, ಕನ್ನಿಕೇರಿ ಪಂಪಾತಿ, ಅಂಗವಿಕಲಸಂಘದ ಅಧ್ಯಕ್ಷ ಎಸ್.ನಾಗರಾಜ್, ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ಆರ್.ಸತ್ಯಪ್ಪ, ಸ್ಟರ್‍ಪೊಂಪಾಪತಿ, ಐ.ಲೋಕೇಶ್, ಪ್ರತಾಪ್, ವೆಂಕಟೇಶ್, ಹನುಮಂತ, ರಾಮಣ, ಅಂಜಣ್ಣ, ಮಹಿಳೆಯರು, ಅಂಗವಿಕಲರು ಇದ್ದರು.
ಕುಡುತಿನಿ ಪಿಎಸ್‍ಐ ಮೊಹಮ್ಮದ್ ರಫಿಕ್ ನೇತೃತ್ವದಲ್ಲಿ ಬಿಗಿಭದ್ರತೆ ಏರ್ಪಡಿಸಿದ್ದರು.