ಕುಡುತಿನಿಯಲ್ಲಿ ಸಂಡೂರು ಶಾಸಕರೊಂದಿಗೆಅಲ್ಲಂ ವೀರಭದ್ರಪ್ಪ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,7- ತಾಲೂಕಿನ ಕುಡುತಿನಿ ಗ್ರಾಮದಲ್ಲಿ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ ತುಕರಾಂ ಅವರ ಪರವಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮತಯಾಚನೆ ಮಾಡಿದರು.
ಶಾಸಕ ತುಕರಾಂ ಅವರನ್ನು ಕಳೆದ ಮೂರು ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಹ್ಯಾಟ್ರಿಕ್ ಹೀರೋ ಅವರು.  ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ರಸ್ತೆಗಳನ್ನು ಅಭಿವೃದ್ಧಿ ಪಡೆಸಿದ್ದಾರೆ. ನಮ್ಮಂತೆ ಸರಳ ಸಜ್ಜಿನಿಯಿಕೆಯಿಂದ ಇರುವ ತುಕರಾಂ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ. ಸಂಡೂರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿ ಎಂದರು.
ಶಾಸಕ ತುಕರಾಂ ಮಾತನಾಡಿ ನಿಮ್ಮೆಲ್ಲರ ಆಶಿರ್ವಾದ ಸದಾ ಇರಲಿ ಎಂದು ಮತದಾರರಲ್ಲಿ ಕೋರಿದರು.

One attachment • Scanned by Gmail