ಕುಡುತಿನಿಯಲ್ಲಿ ನೀರಿಲ್ಲವೆಂದುಖಾಲಿ ಕೊಡ ಪ್ರದರ್ಶಿಸಿದ ಮಹಿಳೆಯರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ತಾಲೂಕಿನ ಕುಡತಿನಿ ಪಟ್ಟಣದ ಆರನೇ ವಾರ್ಡಿನ ವಸಗೇರಪ್ಪ ಗುಡಿ ಹತ್ತಿರದ ಬೋರ್ ಇದೇ ತಿಂಗಳಲ್ಲಿ ಎರಡೂ ಬಾರಿ ಕೆಟ್ಟಿದ್ದು ರೊಚ್ಚಿಗೆದ್ದ ಮಹಿಳೆಯರು ಬೋರ್ ಮುಂದೆ ಇಂದು  ಖಾಲಿ ಕೊಡಗಳ ಸಮೇತ ಪ್ರತಿಭಟಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಹಾಗೂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ, ಬಿರು ಬಿಸಿಲಿನಲ್ಲಿ ನೀರಿಗಾಗಿ ಓಣಿ ಓಣಿ ಅಲೆದಾಡುವಂತಾಗಿದೆ.  ಕೂಡಲೇ ಅಧಿಕಾರಿಗಳು  ಸಮರ್ಪಕವಾಗಿ ನೀರು ಒದಗಿಸಬೇಕು ಇಲ್ಲದಿದ್ದರೆ.  ಪಟ್ಟಣ ಪಂಚಾಯಿತಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಳಗಲ್ಲು ಮಲೆಮ್ಮ, ಹುಲಿಗೆಮ್ಮ, ಗಂಗಮ್ಮ, ಹಂಪಮ್ಮ, ಅನುಸೂಯಮ್ಮ, ರಾಮಲೆಮ್ಮ, ಶಾಲಿನಿ, ವಸಂತ, ಇತರರು ಇದ್ದರು