ಕುಡುತಿನಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕ

ಬಳ್ಳಾರಿ:ಮೇ.26- ಕುರುಗೋಡು ತಾಲೂಕು ಕುಡುತಿನಿ ಪಟ್ಟಣದ ವಾರ್ಡ ನಂ-6 ರಲ್ಲಿ ಅವೈಜ್ಞಾನಿಕವಾಗಿ ನೀರಿನ ಪೈಪ್ ಲೈನ್ ಅಳವಡಿಕೆ ಜನರು ರಸ್ತೆಯಲ್ಲಿ ಓಡಾಡಲು ಹರಸಹಾಸ ನೀರು ಬಂದಿವೆ ಎಂದು ಕಡೆ ಖುಷಿ, ಮತ್ತೊಂದು ಕಡೆ ನೀರು ತೆಗೆದುಕೊಂಡು ಹೋಗುವಾಗ ಬಿದ್ದು ಕೈಕಾಲು ಮುರಿದರೆ ಜೀವನ ಹೇಗೆ ಎಂದು ಪಟ್ಟಣ ಪಂಚಾಯತಿ ಕಾರ್ಯವೈಖರಿ ಬಗ್ಗೆ ಎರಡು ತಿಂಗಳಿನಿಂದ ಅಧಿಕಾರಿಗಳ ಗಮನಕ್ಕೆ ತಂದರು ಇನ್ನೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಈ ಪ್ರದೇಶದ ಜನರು ವಾರ್ಡಿನ ಸದಸ್ಯರು ಹಾಗೂ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಹಟ್ಟಿ ತಿಮ್ಮಪ್ಪ, ರಾಮಯ್ಯ, ರೇವಮ್ಮ, ಅನ್ನಪೂರ್ಣ, ಯಶೋಧ ಇತರರು ಈ ಬಗ್ಗೆ ಆಕ್ಷೇಪ ‌ವ್ಯಕ್ತಪಡಿಸಿದ್ದಾರೆ