ಕುಡುತಿನಿಯಲ್ಲಿ ಕಾನುನು ಅರಿವು -ನೆರವು

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.12: ತಾಲೂಕಿನ  ಕುಡತಿನಿಯ ವಾಲ್ಮೀಕಿ ಭವನದಲ್ಲಿ ಇಂದು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸ್ಥಳೀಯ ಪಟ್ಟಣ ಪಂಚಾಯತಿ  ಸಹಯೋಗದೊಂದಿಗೆ ಕಾನೂನು ಅರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿಯ  ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಸಂಪತ್ ಕುಮಾರ್ ಬಿ  ಕಾರ್ಯಕ್ರಮ ಉದ್ಘಾಟಿಸಿ.  ಉಚಿತ ಕಾನೂನು ನೆರವಿನ‌ ಬಗ್ಗೆ  ಮಾಹಿತಿ ನೀಡಿದರು ಹಾಗೂ ಸಮಾಜದ ಅನಿಷ್ಟ ಪದ್ದತಿ ಬಾಲ್ಯವಿವಾಹ, ಬಾಲ ಕಾರ್ಮಿಕತೆ ಬಗ್ಗೆ ಮಾತನಾಡಿದರು.
ಹಿರಿಯ ವಕೀಲ ಕೆ.ಎಂ. ಚಿಂತಾಮಣಿ ಅವರು ಭೂ ಪರಿವರ್ತನೆ ವಿಷಯದ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯರಾದ  ಟಿ.ಕೆ‌.ಕಾಮೇಶ ವಕೀಲರು ಅವರು  ಮೋಟಾರು ವಾಹನ ಕಾನೂನು ಬಗ್ಗೆ  ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿಯ  ಮುಖ್ಯಾಧಿಕಾರಿ  ತೀರ್ಥ ಪ್ರಸಾದ್, ಕಂದಾಯ ಅಧಿಕಾರಿ ಮಧುರಿ, ಸಿಬ್ಬಂದಿಗಳಾದ ಭರಮಪ್ಪ, ಭಾಷ, ಸ್ವಾಮಿ, ಗೋಪಾಲ, ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸಾರ್ವಜನಿಕರಾದ ಗುಡಸಲಿ ಮಲ್ಲಯ್ಯ, ಶಿವಪ್ಪ, ಬಸವರಾಜ ಇತರರು ಇದ್ದರು.