(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.28: ತಾಲೂಕಿನ ಕುಡತಿನಿ ಪಟ್ಟಣದಲ್ಲಿ ಕೈಗಾರಿಕೆಗಳ ಆರಂಭ ಮಾಡಿ, ಇಲ್ಲಾ ಜಮೀನು ಹಿಂದಕ್ಕೆ ಕೊಡಿ ಎಂದು ನಡೆಸುತ್ತಿರುವ ರೈತರ ಹೋರಾಟ ಐದು ತಿಂಗಳು ಕಳೆದು 161 ದಿನಕ್ಕೆ ತಲುಪಿದೆ.
ಲಕ್ಷ್ಮೀ ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್.ಎಂ.ಡಿ.ಸಿ ಕಂಪನಿಗಳು ಕಾರ್ಖಾನೆ ಸ್ಥಾಪಿಸಲು ತಾಲೂಕಿನ ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಜಾನೆಕುಂಟೆ, ಕೊಳಗಲ್ಲು, ಎರ್ರಂಗಳಿ ಗ್ರಾಮಗಳ ರೈತರ 1250 ಎಕರೆ ಭೂಮಿಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದೇ ಕೇವಲ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು, ರೈತರನ್ನು ವಂಚಿಸುತ್ತಿರುವ ಕಂಪನಿಗಳು ಹಾಗೂ ಸರ್ಕಾರದ ನಡೆ ಖಂಡಿಸಿ ನಡೆಸುತ್ತಿರುವ ಹೋರಾಟ ಈಗ 161 ದಿನಕ್ಕೆ ತಲುಪಿದೆ. ಇತ್ತ ಉಳುಮೆ ಮಾಡಲು ಜಮೀನು ಇಲ್ಲದೇ, ರೈತರ ಮಕ್ಕಳಿಗೆ ಉದ್ಯೋಗವೂ ಇಲ್ಲ. ರೈತರು ಜೀವನ ಸಾಗಿಸಲು ಪರದಾಡುವಂತಾಗಿದೆ, ಕೂಡಲೇ ಕಾರ್ಖಾನೆ ಸ್ಥಾಪಿಸಿ,ಉದ್ಯೋಗ ನೀಡಿ, ಬೆಲೆಯಲ್ಲಿ ಆದ ತಾರತಮ್ಯ ಸರಿಪಡಿಸಿ. ಹೊಸ ಬೆಲೆ ನೀಡಬೇಕು, ಇಲ್ಲವೇ ಜಮೀನುಗಳನ್ನು ವಾಪಸ್ಸು ನೀಡಿ ರೈತರ ಕುಟುಂಬಗಳನ್ನು ರಕ್ಷಣೆ ಮಾಡಲು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಎಮ್.ನಾಗದೇವ, ಟಿ.ಕೆ.ಕಾಮೇಶ, ತಿಪ್ಪೇಸ್ವಾಮಿ, ಪಾಂಡು, ಗೌನೂರು ಅಂಜಿನಪ್ಪ, ಶಂಕ್ರಪ್ಪ, ಶೇಖರ್, ದೊಡ್ಡಬಸಪ್ಪ, ಬನ್ನೆಟ್ಟಿ ನಾಗಪ್ಪ, ಕುಡತಿನಿ, ವೇಣಿವೀರಾಪುರ, ಜಾನೆಕುಂಟೆ, ಹರಗಿನಡೋಣಿ, ಕೊಳಗಲ್ಲು ರೈತರು,ವಿವಿಧ ಸಂಘಟನೆಗಳು ಮುಖಂಡರು ಪಾಲ್ಗೊಂಡಿದ್ದರು.
One attachment • Scanned by Gmail