ಕುಡುಕರ ಹಾವಳಿ ತಪ್ಪಿಸಲು ಮನವಿ


ಸಂಜೆವಾಣಿ ವಾರ್ತೆ
ಸಂಡೂರು : ಜು: 23: ಮಧ್ಯಮಾರಾಟದಿಂದ ಕುಡುಕರ ಹಾವಳಿ ವಿಪರೀತವಾಗಿದ್ದು ಅದಕ್ಕೆ ತಕ್ಷಣ ಕಡಿವಾಣ ಹಾಕಿ ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ವಾದೀತು ಎಂದು ತೋರಣಗಲ್ಲು ನಿವಾಸಿಗಳಾದ ಎಂ. ಶೇಷಾವಲಿ ಒತ್ತಾಯಿಸಿದರು.
ಅವರು ತಾಲೂಕಿನ ತೋರಣಗಲ್ಲಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮಸ್ಥರು ಕುಡುಕರ ಹಾವಳಿ ವಿರುದ್ದ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿ ಹೆಚ್.ಎಲ್.ಸಿ. ಕಾಲುವೆಯ ಬದಿಯಲ್ಲಿ ಅನೇಕ ವರ್ಷಗಳಿಂದ ಅನಧಿಕೃತ ಮದ್ಯ ಮರಾಟವು ನಿರಂತರವಾಗಿ ನಡೆಯುತ್ತಿದ್ದು ಇದರಿಂದ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ, ಅಲ್ಲದೆ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗುತ್ತಿವೆ, ಅದ್ದರಿಂದ ತಕ್ಷಣ ಕಡಿವಾಣ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮಕ್ಕೆ ಬೇಕಾದ ಕುಡಿಯುವ ನೀರು ಇತರ ಸೌಲಭ್ಯಗಳ ಕುರಿತು ಸಹ ಬೇಡಿಕೆ ಸಲ್ಲಿಸಿ ದರು.