ಕುಡುಕರ ತಾಣವಾದ ಮಂಟಪ

ನಂಜನಗೂಡು:ಮಾ:29:ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೇರಿದ ಕಪಿಲಾ ನದಿ ನೀರಿನಲ್ಲಿ ಇರುವ 16 ಕಾಲು ಮಂಟಪ ತನ್ನದೇ ಆದ ಇತಿಹಾಸ ಹೊಂದಿದ್ದು, ಈಗ ಈ ಸ್ಥಳ ಕುಡುಕರ ತಾಣವಾಗಿದೆ
ಈ 16 ಕಾಲು ಮಂಟಪ ದೇವಸ್ಥಾನದ ಪೂಜೆಗಳಿಗೆ ಕೆಲವು ಸಂದರ್ಭದಲ್ಲಿ ಉಪಯೋಗಿಸುತ್ತಾರೆ ಸ್ಥಳದಲ್ಲಿ ಕುಡಿಯುವುದು ಅಲ್ಲೆ ಮಲಗುವುದು ಸಿಗರೇಟ್ ಸೇದುವುದು ಈ ರೀತಿ ಅನೇಕ ಅನೈತಿಕ ಚಟುವಟಿಕೆಗಳನ್ನು ಈ ಸ್ಥಳದಲ್ಲಿ ಕಿಡಿಗೇಡಿಗಳು ಮಾಡುತ್ತಿದ್ದಾರೆ ಇಂಥವರಿಗೆ ಕ್ರಮ ತೆಗೆದುಕೊಂಡು ಇದನ್ನು ತಕ್ಷಣ ತಪ್ಪಿಸಿ ಹದಿನಾರು ಕಾಲು ಮಂಟಪ ರಕ್ಷಿಸಬೇಕೆಂದು ಶ್ರೀಕಂಠೇಶ್ವರ ಸ್ವಾಮಿ ಭಕ್ತಾದಿಗಳು ಒತ್ತಾಯ ಮಾಡಿದ್ದಾರೆ