ಕುಡುಕರ ಅಡ್ಡೆಯಾದ ವಡ್ನಾಳ್ ಆರೋಗ್ಯ ಕೇಂದ್ರ

ದಾವಣಗೆರೆ.ಮೇ.೨೮; ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ೧.೮೩ ಕೋಟಿ ರೂ ವೆಚ್ಚ ಮಾಡಿ ಕಟ್ಟಿದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ಇಸ್ಪೇಟ್  ಮತ್ತು ಕುಡುಕರ ಅಡ್ಡೆಯಾಗಿದೆ.ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಮೂರು ವರ್ಷಗಳೇ ಕಳೆದರು ಉದ್ಘಾಟನೆಯಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ಚನ್ನಗಿರಿ ತಾಲ್ಲೂಕಿನ ವಡಾಳ್ ಗ್ರಾಮದಲ್ಲಿ 2015-16ರಲ್ಲಿ ಸಾರ್ಕರವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿ ತದನಂತರ ಕೆ.ಹೆಚ್.ಎಸ್ . ಆರ್.ಡಿ.ಪಿ. ವತಿಯಿಂದ 1.83 ಕೋಟಿ ಲಕ್ಷ ರೂ ಅನುದಾನದಲ್ಲಿ 2017-2018ಕ್ಕೆ  ಮುಕ್ತಾಯಗೊಂಡಿದೆ. ಈ ಕೇಂದ್ರಆರೋಗ್ಯ ಇಲಾಖೆಯಿಂದ ಅನುಮತಿ ಪಡೆದು ಸಾರ್ವಜನಿಕರಿಗೆ ಮುಕ್ತವಾಗಬೇಕಿತ್ತು ಆದರೆ ಇಂದು ಇಸ್ಟೇಟ್ ಮತ್ತು ಕುಡುಕರ ಅಡ್ಡೆಯಾಗಿದೆ.  ಪ್ರಸ್ತುತ ದಿನಗಳಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಕೋವೀಡ್ ಸೊಂಕಿತರ ಸಂಖ್ಯೆ ಹೆಚ್ಚಳವಿದ್ದು , ಇಂತಹ ಸಂದರ್ಭದಲ್ಲೂ ಸಹ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ದುರಂತ.  ತಾಂತ್ರಿಕ ತೊಂದರೆ ಇದೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರವನ್ನು ತಕ್ಷಣಕ್ಕೆ ತೆರೆಯಲು ಅವಕಾಶಗಳು ಸಾಧ್ಯವಿಲ್ಲ ಎಂದಾದರೆ  ನಮಗೆ ನೀಡಿ ನಾವು ಖಾಸಗಿ ವೈದ್ಯಕೀಯ ಸಂಸ್ಥೆಗಳೊಂದಿಗೆ ತಕ್ಷಣವೇ ವೈದ್ಯಕೀಯ ಕೇಂದ್ರ ತೆರೆಯಲು ಸಿದ್ದರಿದ್ದೇವೆ . ಇದಕ್ಕೆ ಅನುಮತಿ ನೀಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.ಒಂದು ವೇಳೆ ಈ ಆರೋಗ್ಯ ಕೇಂದ್ರ ಪ್ರಾರಂಭವಾದರೆ ಸುತ್ತಮುತ್ತಲಿನ ಸುಮಾರು ೩೮ ಹಳ್ಳಿಯ ಜನರಿಗೆ ಅನುಕೂಲವಾಗಲಿದೆ.ಆದ್ದರಿಂದ ಶಾಸಕರು ಹಾಗೂ ಆರೋಗ್ಯ ಸಚಿವರು ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ವೀರಾಚಾರ್ ಇದ್ದರು.