ಕುಡಿವ ನೀರು ಸಮಸ್ಯೆ ಪರಿಹರಿಸಲು ಸಾರ್ವಜನಿಕರ ಆಗ್ರಹ.


ಸಂಜೆವಾ
ಸಿರಿಗೇರಿ ಜೂ 12. ಗ್ರಾಮದ ಕೆಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಗ್ರಾಮ ಆಡಳಿತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಕುಡಿವ ನೀರಿಗಾಗಿ ಗ್ರಾಮದ ಹೊರ ಪ್ರದೇಶದಲ್ಲಿ ಹಾಕಿರುವ ಕೊಳವೆ ಬಾವಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳಾಯಿಗಳಿಗೆ ನೀರು ಬರುವುದು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ವಾರ್ಡುಗಳಲ್ಲಿ ಬರುವ ನೀರು ಸಹ ಸಮರ್ಪಕವಾಗಿ ಬಿಡುವ ನಿಟ್ಟಿನಲ್ಲಿ ಗ್ರಾಮಡಳಿತ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಗ್ರಾಮದ ಒಂದನೇ ವಾರ್ಡ್ ಜನತಾ ಕಾಲೋನಿಗೆ ಸಂಬಂಧಪಟ್ಟಂತೆ ಜನತಾ ಕಾಲೋನಿ, ಬಳಗೇರು ಹೊಲ ಪ್ರದೇಶ, ಸಿಂದೋಳರ ಕಾಲೋನಿ, ಆಚಾರಿ ಹೊಲ, ಮುಲ್ಲಾರು ಹೊಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ನೀರಿನ ಕೊರತೆ ಹೆಚ್ಚಾಗಿ ಉಲ್ಮಣಗೊಂಡು ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಜೆ ಜೆ ಎಂ  ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ಪೈಪ್ ಲೈನ್ಗೆ ಈಗಿನ ಕೊಳವೆ ನೀರಿನ ಸಂಪರ್ಕ ಮಾಡಿರುವುದು. ನೀರು ಸರಿಯಾಗಿ ಬರುತ್ತಿಲ್ಲವೆಂದು ಕೆಲ ಜನರು ಪೈಪ್ಲೈನ್ ಕಿತ್ತಿಕೊಂಡು ಡೈರೆಕ್ಟ್ ಮಾಡಿಕೊಂಡಿರುವುದು. ನೀರು ಬಿಟ್ಟ ತಕ್ಷಣ ಮೊದಲಿನ ಎರಡನೇ ಲೈನ್ ಗಳವರು ಕರೆಂಟ್  ಮೋಟರುಗಳನ್ನು ಅಳವಡಿಸಿಕೊಂಡು ನೀರು ಹಿಡಿಯುವುದು. ಇದರಿಂದ ಮುಂದೆ ಇರುವ ಕೆಲ ಲೈನ್ಗಳಿಗೆ  ಪ್ರದೇಶಗಳಿಗೆ ನೀರು ಹತ್ತದೇ ಇರುವುದು ಮುಂದುವರೆಯುತ್ತಿದೆ ಇದನ್ನು ಗ್ರಾಮಾಡಳಿತಕ್ಕೆ ತಿಳಿಸಿ ಕರೆಂಟ್ ಮೋಟಾರ್ಗಳನ್ನು ಪಂಚಾಯತಿ ವತಿಯಿಂದ ಜಪ್ತಿ ಮಾಡುವ ಕೆಲಸ, ಪೈಪ್ ಲೈನ್ ಅನ್ನು ಕಿತ್ತಿಕೊಂಡು ಡೈರೆಕ್ಟ್ ಮಾಡಿಕೊಳ್ಳುವರ ಮೇಲೆ ಕ್ರಮ ಜರುಗಿಸುವ ಕೆಲಸ ಮಾಡದೇ ಇರುವುದರಿಂದ ನೀರಿನ ಸಮಸ್ಯೆ ದಿನ ದಿನಕ್ಕೆ ಹೆಚ್ಚುತ್ತಿದೆ. ಈಗ ಮೂರು ದಿನಕ್ಕೆ ಒಂದು ಸಲ ನೀರು ಬಿಡಲಾಗುತ್ತಿದ್ದು ನೀರು ಬಿಟ್ಟಾಗ ಕೆಲ ಪ್ರದೇಶಗಳಿಗೆ ನೀರು ಬರದೆ ಸಮಸ್ಯೆಯಾಗುತ್ತಿದೆ ದೂರದ ಪ್ರದೇಶದಿಂದ ಬಂಡಿಗಳಲ್ಲಿ ಸೈಕಲ್ ನಲ್ಲಿ  ನೀರು ಹೊತ್ತು ತರುವ ಅನಿವಾರ್ಯತೆ ಎದುರಾಗಿದೆ. ಸುಮಾರು ಹತ್ತು ದಿನಗಳಿಂದ ಕುಡಿವ ನೀರು ಸಮರ್ಪಕವಾಗಿ ಬರದೇ ಇದ್ದುದರಿಂದ ಜನತ ಕಾಲೋನಿ, ಸಿಂದೋಳರ ಕಾಲೋನಿ, ಆಚಾರಿ ಕಾಲೋನಿ, ಬಳಗೇರಿ ಹೊಲ ಪ್ರದೇಶದ ನಿವಾಸಿಗಳು ಪಂಚಾಯಿತಿ ಮುಂದೆ ಧರಣಿ ನಡೆಸಲು ಮುಂದಾಗುವ ಯೋಚನೆಯಲ್ಲಿದ್ದು ಕೂಡಲೇ ಗ್ರಾಮಾಡಳಿತ ಎಚ್ಚೆತ್ತುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಪಡಿಸಲಾಗುತ್ತಿದೆ. 

One attachment • Scanned by Gmail