ಕುಡಿವ ನೀರಿನ ಸಮಸ್ಯೆ: ಶಾಸಕ ಮಾನಪ್ಪ ವಜ್ಜಲ್ ಗರಂ

ಮುದಗಲ್,ಜೂ.೧೪-
ಪಟ್ಟಣದ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಪುರಸಭೆ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು.
ಪುರಸಭೆ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ತಪ್ಪು ಉತ್ತರ ನೀಡಿದ ಮುಖ್ಯಾಧಿಕಾರಿ ಪರಶುರಾಮ ನಾಯಕ, ಮಹಾಲಿಂಗರಾಯ, ನಿರಂತರ ಕುಡಿಯುವ ನೀರಿನ ಯೋಜನೆಯ ಎಂಜಿನೀಯರ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ತರಾಟಗೆ ತಗೆದುಕೊಂಡರು.
ಪಟ್ಟಣದಲ್ಲಿ ೧೫೩ ಕೊಳವೆ ಬಾವಿಗಳಿವೆ. ಬಸವಸಾಗರ ಜಲಾಯಶದಿಂದ ಶಾಶ್ವತ ಕುಡಿವ ನೀರು ಸರಬರಾಜು ಆಗುತ್ತಿದ್ದರು ನೀರಿನ ಸಮಸ್ಯೆ ಇದೆ. ಪುರಸಭೆ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಸಮಸ್ಯೆ ಉಂಟಾಗಿದೆ.
ಮುಖ್ಯಾಧಿಕಾರಿ ಪರಶುರಾಮ ನಾಯಕ್, ಪುರಸಭೆ ಸದಸ್ಯರಾದ ಗುಂಡಪ್ಪ ಗಂಗಾವತಿ, ಮಹಾಲಕ್ಷ್ಮೀ ಕರಿಯಪ್ಪ, ಬಾಬು ಉಪ್ಪಾರ ಮಹಾಲಿಂಗರಾಯ, ಆರೀಫಾ ಉನ್ನಿಸಾ ಬೇಗಂ, ಜಿಲಾನಿ ಪಾಷಾ, ಚನ್ನಮ್ಮ ದಳವಾಯಿ ಮಠ ಇದ್ದರು.