ಕುಡಿಯುವ ನೀರು ಹರಿಸುವಂತೆ ಒತ್ತಾಯ

ಸಿರವಾರ,ಮೇ.೨೨- ಪಟ್ಟಣ ವಾರ್ಡ್ ನಂ. ೦೨ ಮತ್ತು ೩ ನೇ ವಾರ್ಡಿನಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಹೊಸ ಪೈಪ್ ಲೈನ್ ಬಂದರು ಅದಕ್ಕೆ ಕನೆಕ್ಷನ್ ನೀಡ ಮತ್ತು ಈ ವಾರ್ಡಿನಲ್ಲಿ ಖಾಸಗಿಯಾಗಿ ಮೋಟರ್ ಬಳಸಿ ನೀರು ಉಪಯೋಗಿಸುವುದರಿಂದ ಈ ಭಾಗಕ್ಕೆ ತೊಂದರೆ ನಿಮಿತ್ಯ ನಮಗೆ ಸರಿಯಾಗಿ ನೀರು ಒದಗಿಸಬೇಕು ಎಂದು ಪ.ಪಂ ಸಮೂದಾಯ ಸಂಘಟಾನಾಧಿಕಾರಿ ಹಂಪಯ್ಯ ಸಾಹುಕಾರಗೆ ವಾರ್ಡಿನ ನಿವಾಸಿಗಳು ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದರು.
ವಾರ್ಡ್ ನಂ: ೦೨ ಮತ್ತು ೦೩ ನೇ ವಾರ್ಡಿನಲ್ಲಿ ಸಮರ್ಪಕ ನೀರು ಬಾರದೇ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಅಲ್ಲದೇ ೦೨ನೇ ವಾರ್ಡಿನಲ್ಲಿ ಹೊಸ ಪೈಪ್ ಲೈನ್ ಕನೆಕ್ಷನ್ ಮಾಡಿ ಎಲ್ಲಿಂದರಲ್ಲಿ ಗುಂಡಿ ಬಿಟ್ಟಿದ್ದು ಇದರಿಂದ ಮಕ್ಕಳು ವೃದ್ಧರು ತಿರುಗಾಡಲು ತೊಂದರೆಯಾಗಿದೆ. ಇಲ್ಲಿ ಸಿ.ಸಿ. ರಸ್ತೆಯನ್ನು ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಅಲ್ಲದೇ ಈ ಮೇಲ್ವಾಗದ ಕೆಲವು ಜನರು ತಮ್ಮ ವೈಯುಕ್ತಿಕವಾಗಿ ಮೋಟಾರ್ ಬಳಸುವುದರಿಂದ ನೀರು ಸರಿಯಾಗಿ ಸರಬರಾಜು ಆಗದೇ ಅಲ್ಲಿ ಸಾಕಾಗಿ ಹೊಗುತ್ತವೆ ಮತ್ತು ಮರಾಟ ರಸ್ತೆಯಲ್ಲಿ ಮತ್ತು ಬಯಲು ಆಂಜನೇಯ ದೇವಸ್ಥಾನದಲ್ಲಿ ಇರುವ ಇಲ್ಲಿಗೆ ಹೊಸ ಕನೆಕ್ಷನ್ ನೀಡದೇ ಹಾಗೇ ಬಿಟ್ಟಿದ್ದಾರೆ. ಇದನ್ನು ಕನೆಕ್ಟನ ಮಾಡಬೇಕು.
ಕಾರಣ ತಾವು ಖುದ್ದಾಗಿ ಈ ವಾರ್ಡಿಗೆ ಭೇಟಿ ನೀಡಿ ಈ ವಾರ್ಡಿನಲ್ಲಿ ಇರುವ ಅನಧಿಕೃತ ಮೋಟಾರ್‌ಗಳನ್ನು ತೆರವುಗೊಳಿಸಿ ನಮ್ಮ ಭಾಗದ ಎರಡು ವಾರ್ಡಿನವರಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು ಎಂದು ಮನವಿ ಪತ್ರದ ಮೂಲಕ ತಿಳಿಸಿದರು
ಈ ಸಂದರ್ಭದಲ್ಲಿ ನಿವಾಸಿಗಳಾದ ವೀರೇಶ ನಾಯಕ, ರಾಮು ನಾಯಕ, ಅಂಬರೇಶ ನಾಯಕ, ವೆಂಕಟೇಶ, ಉದಯ, ಗೋವಿಂದ, ನಾಗರಾಜ, ಹನುಮೇಶ ಸೇರಿದಂತೆ ಇನ್ನಿತರರು ಇದ್ದರು.